ಹೊಟ್ಟೆಪಾಡಿಗೆ ಬಸ್ ಡ್ರೈವರ್ ಆದ ಖ್ಯಾತ ಕ್ರಿಕೆಟಿಗ

Webdunia
ಗುರುವಾರ, 4 ಮಾರ್ಚ್ 2021 (09:47 IST)
ಕೊಲೊಂಬೊ: ಶ್ರೀಲಂಕಾದ 2011 ರ ವಿಶ್ವಕಪ್ ತಂಡದ ಭಾಗವಾಗಿದ್ದ ಸೂರಜ್ ರಣದೀವ್ ಬಗ್ಗೆ ಕ್ರಿಕೆಟ್ ಪ್ರಿಯರಿಗೆ ಗೊತ್ತಿರುತ್ತದೆ. ಆ ಕ್ರಿಕೆಟಿಗ ಈಗ ತಮ್ಮ ಹೊಟ್ಟೆಪಾಡಿಗಾಗಿ ಆಸ್ಟ್ರೇಲಿಯಾದಲ್ಲಿ ಬಸ್ ಚಾಲಕನ ಕೆಲಸ ಮಾಡುತ್ತಿದ್ದಾರೆ ಎಂದರೆ ನೀವು ನಂಬಲೇಬೇಕು.


ಲಂಕಾ ಪರ 12 ಟೆಸ್ಟ್, 31 ಏಕದಿನ, ಮತ್ತು 7 ಟಿ20 ಪಂದ್ಯಗಳನ್ನಾಡಿದ್ದ ಮಾಜಿ ಕ್ರಿಕೆಟಿಗ ರಣದೀವ್ ತಮ್ಮ ಹೊಟ್ಟೆಪಾಡಿಗಾಗಿ ಈಗ ಆಸ್ಟ್ರೇಲಿಯಾದ ಟ್ರಾವೆಲ್ಸ್ ಕಂಪನಿಯೊಂದರಲ್ಲಿ ಬಸ್ ಚಾಲಕನಾಗಿ ಕೆಲಸ ಮಾಡುತ್ತಿದ್ದಾರೆ. ಈ ಟ್ರಾವೆಲ್ಸ್ ಕಂಪನಿಯಲ್ಲಿ 1200 ಬಸ್ ಚಾಲಕರಿದ್ದು, ಅವರಲ್ಲಿ ರಣದೀವ್ ಮಾತ್ರವಲ್ಲದೆ, ಇನ್ನೊಬ್ಬ ಲಂಕಾ ಕ್ರಿಕೆಟಿಗ ಚಿಂತಕ ಜಯಸಿಂಘೆ ಕೂಡಾ ಸೇರಿದ್ದಾರೆ.

ಕ್ರಿಕೆಟ್ ಬಿಟ್ಟ ಮೇಲೆ ಇವರಿಗೆ ಹೊಟ್ಟೆಪಾಡಿಗಾಗಿ ಒಂದು ವೃತ್ತಿ ಬೇಕಿತ್ತು. ಆಗ ಕೈ ಹಿಡಿದಿದ್ದೇ ಈ ಕೆಲಸ. ಸದ್ಯಕ್ಕೆ ರಣದೀವ್ ಮೆಲ್ಬೋರ್ನ್ ನಲ್ಲಿದ್ದಾರೆ. ಸದ್ಯಕ್ಕೆ ಬಿಡುವು ಸಿಕ್ಕಾಗಲೆಲ್ಲಾ ಅಲ್ಲಿನ ಕ್ಲಬ್ ಪರ ಕ್ರಿಕೆಟ್ ಆಡುತ್ತಿರುತ್ತಾರಂತೆ. ಅಷ್ಟೇ ಏಕೆ ಇತ್ತೀಚೆಗೆ ಭಾರತದ ವಿರುದ್ಧ ನಡೆದ ಆಸ್ಟ್ರೇಲಿಯಾ ಟೆಸ್ಟ್ ಸರಣಿಯಲ್ಲಿ ಆಸೀಸ್ ಆಟಗಾರರಿಗೆ ನೆಟ್ ಬೌಲರ್ ಆಗಿಯೂ ಸಹಾಯ ಮಾಡಿದ್ದರಂತೆ. ಆದರೆ ಹೊಟ್ಟೆ ಪಾಡಿಗೆ ಚಾಲಕನ ಕೆಲಸ ಮಾಡುತ್ತಿದ್ದಾರೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಶ್ರೇಯಾಂಕ ಪಾಟೀಲ್ ಅಂದುಕೊಂಡಿದ್ದು ಆಗಲೇ ಇಲ್ಲ: ವಿಶ್ವಕಪ್ ನಿಂದಲೇ ಔಟ್

IPL 2027: ಐಪಿಎಲ್ 2027 ರ ಆರಂಭಿಕ ದಿನಾಂಕ ಪ್ರಕಟಿಸಿದ ಬಿಸಿಸಿಐ; ಇಲ್ಲಿದೆ ಸಂಪೂರ್ಣ ಅಪ್‌ಡೇಟ್ಸ್

ಲಾರ್ಡ್ಸ್ ನಲ್ಲಿ ಭಾರತಕ್ಕೆ ವಿಶ್ವಕಪ್ ಗೆದ್ದುಕೊಡಬೇಕು ಎಂದಿದ್ದ ಶ್ರೇಯಾಂಕ ಪಾಟೀಲ್: ಇದೇನಾಗಿ ಹೋಯ್ತು

IND vs AFG: ಅಫ್ಘಾನಿಸ್ತಾನ ವಿರುದ್ಧ ಟೀಂ ಇಂಡಿಯಾಗೆ ಮತ್ತೊಂದು ಸುಲಭ ಜಯ

ICC Women T20 WC: ಕ್ವೀನ್ ಎಂದು ಸುಮ್ನೇ ಹೇಳಲ್ಲ.. ಹರ್ಮನ್ ಪ್ರೀತ್ ಕೌರ್ ನ್ನೇ ಹಿಂದಿಕ್ಕಿದ ಸ್ಮೃತಿ ಮಂಧಾನ

ಮುಂದಿನ ಸುದ್ದಿ
Show comments