Publish Date: Thu, 04 Mar 2021 (08:51 IST)
Updated Date: Thu, 04 Mar 2021 (08:54 IST)
ಅಹಮ್ಮದಾಬಾದ್: ಭಾರತ ಮತ್ತು ಇಂಗ್ಲೆಂಡ್ ನಡುವಿನ ನಾಲ್ಕನೇ ಮತ್ತು ಅಂತಿಮ ಟೆಸ್ಟ್ ಪಂದ್ಯ ಇಂದಿನಿಂದ ಅಹಮ್ಮದಾಬಾದ್ ನಲ್ಲಿ ಆರಂಭವಾಗಲಿದೆ.
ನಾಲ್ಕು ಟೆಸ್ಟ್ ಪಂದ್ಯಗಳ ಸರಣಿಯಲ್ಲಿ ಭಾರತ 2-1 ರಿಂದ ಮುನ್ನಡೆಯಲ್ಲಿದೆ. ಈ ಪಂದ್ಯ ಗೆದ್ದರೆ ಭಾರತಕ್ಕೆ ವಿಶ್ವಚಾಂಪಿಯನ್ ಶಿಪ್ ಹಾದಿ ಸುಗಮವಾಗಲಿದೆ.
ಮೂರನೇ ಟೆಸ್ಟ್ ಪಂದ್ಯ ಎರಡೇ ದಿನಕ್ಕೆ ಮುಕ್ತಾಯ ಕಂಡು ಪಿಚ್ ಬಗ್ಗೆ ಸಾಕಷ್ಟು ಟೀಕೆ ಕೇಳಿಬಂದಿತ್ತು. ಇದು ಕೇವಲ ಸ್ಪಿನ್ ಬೌಲರ್ ಗಳಿಗೆ ನೆರವಾಗುತ್ತಿತ್ತು. ಟೆಸ್ಟ್ ಪಂದ್ಯಕ್ಕೆ ಯೋಗ್ಯವಲ್ಲದ ಪಿಚ್ ಎಂಬ ಟೀಕೆ ಬಂದಿತ್ತು. ಹೀಗಾಗಿ ಈ ಪಂದ್ಯಕ್ಕೆ ಕೊಂಚ ತಿರುವು ಮತ್ತು ಬ್ಯಾಟಿಂಗ್ ಗೆ ಸಹಕಾರಿಯಾಗುವ ಪಿಚ್ ಇರಬಹುದು ಎಂದು ಲೆಕ್ಕಾಚಾರ ಹಾಕಲಾಗಿದೆ.
ಭಾರತ ತಂಡದಲ್ಲಿ ಈ ಪಂದ್ಯಕ್ಕೆ ಜಸ್ಪ್ರೀತ್ ಬುಮ್ರಾ ಸ್ಥಾನಕ್ಕೆ ಉಮೇಶ್ ಯಾದವ್, ವಾಷಿಂಗ್ಟನ್ ಸುಂದರ್ ಸ್ಥಾನಕ್ಕೆ ಕುಲದೀಪ್ ಯಾದವ್ ಅಥವಾ ಹಾರ್ದಿಕ್ ಪಾಂಡ್ಯಗೆ ಸ್ಥಾನ ಸಿಗುವ ಸಾಧ‍್ಯತೆಯಿದೆ. ಪಂದ್ಯ ಬೆಳಿಗ್ಗೆ 9.30 ರಿಂದ ಆರಂಭವಾಗುತ್ತಿದೆ.