ದುಬೈ: ಐಸಿಸಿ ಈ ವರ್ಷದ ಆರಂಭದಿಂದ ಶುರು ಮಾಡಿದ ಮಾಸಿಕ ಆಟಗಾರ ಪ್ರಶಸ್ತಿಗೆ ಟೀಂ ಇಂಡಿಯಾ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಹೆಸರು ನಾಮನಿರ್ದೇಶನಗೊಂಡಿದೆ.
ಅಶ್ವಿನ್ ಜೊತೆಗೆ ಪುರುಷರ ವಿಭಾಗದಲ್ಲಿ ಇಂಗ್ಲೆಂಡ್ ನಾಯಕ ಜೋ ರೂಟ್, ವಿಂಡೀಸ್ ನ ಕೈಲ್ ಮಿಲ್ಸ್ ಹೆಸರೂ ನಾಮನಿರ್ದೇಶನಗೊಂಡಿದೆ.
ಜನವರಿ ತಿಂಗಳ ಆಟಗಾರ ಪ್ರಶಸ್ತಿ ಟೀಂ ಇಂಡಿಯಾ ವಿಕೆಟ್ ಕೀಪರ್ ರಿಷಬ್ ಪಂತ್ ಪಾಲಾಗಿತ್ತು. ಈಗ ಫೆಬ್ರವರಿ ತಿಂಗಳ ಪ್ರಶಸ್ತಿ ಅಶ್ವಿನ್ ಪಡೆದರೆ ಸತತವಾಗಿ ಭಾರತೀಯ ಆಟಗಾರರೇ ಈ ಪ್ರಶಸ್ತಿ ಪಡೆದ ಹಾಗಾಗುತ್ತದೆ.
ಇಂಗ್ಲೆಂಡ್ ನಾಯಕ ಜೋ ರೂಟ್ ಕೂಡಾ ಪ್ರಬಲ ಸ್ಪರ್ಧಿ. ಅವರು ಒಂದು ದ್ವಿಶತಕವಲ್ಲದೆ, ಬೌಲಿಂಗ್ ನಲ್ಲೂ ಮಿಂಚಿದ್ದರು. ಹೀಗಾಗಿ ಇಬ್ಬರ ನಡುವೆ ಪ್ರಬಲ ಪೈಪೋಟಿಯಿದೆ.