Publish Date: Sun, 22 Nov 2020 (09:43 IST)
Updated Date: Sun, 22 Nov 2020 (09:44 IST)
ರಾಂಚಿ: ಮಿಸ್ಟರ್ ಕೂಲ್ ಧೋನಿಯನ್ನು ಹೆಚ್ಚು ಸಿಟ್ಟಿಗೆಬ್ಬಿಸುವುದು, ಅವರು ಹೆಚ್ಚು ಸಿಟ್ಟು ಹೊರಹಾಕುವ ವ್ಯಕ್ತಿ ಯಾರು? ಈ ವಿಚಾರವನ್ನು ಸ್ವತಃ ಅವರ ಪತ್ನಿ ಸಾಕ್ಷಿ ಧೋನಿ ಬಹಿರಂಗಪಡಿಸಿದ್ದಾರೆ.
ಧೋನಿಯನ್ನು ಎಲ್ಲಾ ವಿಚಾರದಲ್ಲೂ ಶಾಂತವಾಗಿರುತ್ತಾರೆ. ಒಂದು ವೇಳೆ ಯಾರಾದರೂ ಅವರನ್ನು ಪ್ರಚೋದಿಸಬಹುದು, ಸಿಟ್ಟಿಗೇಳಿಸಬಹುದು ಎಂದು ಇದ್ದರೆ ಅದು ನಾನು ಮಾತ್ರ. ಯಾಕೆಂದರೆ ಅವರಿಗೆ ಅತ್ಯಂತಹ ಹತ್ತಿರವಾದವಳು ನಾನು. ಹೀಗಾಗಿ ಎಲ್ಲಾ ಸಿಟ್ಟನ್ನೂ ನನ್ನ ಮೇಲೆ ಹಾಕುತ್ತಾರೆ. ಆದರೆ ನನಗೆ ಇದಕ್ಕೆ ಬೇಸರವಿಲ್ಲ ಎಂದು ಸಾಕ್ಷಿ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.