Publish Date: Sat, 14 Nov 2020 (10:18 IST)
Updated Date: Sat, 14 Nov 2020 (10:21 IST)
ಮುಂಬೈ: ದುಬಾರಿ ಬೆಲೆಯ ವಾಚುಗಳನ್ನು ಅಘೋಷಿತವಾಗಿ ಸಾಗಿಸುತ್ತಿದ್ದ ಆರೋಪದ ಮೇರೆಗೆ ಮುಂಬೈ ಇಂಡಿಯನ್ಸ್ ಕ್ರಿಕೆಟಿಗ ಕೃನಾಲ್ ಪಾಂಡ್ಯರನ್ನು ಮುಂಬೈ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ತಡೆದಿದ್ದರು.
ಸುಮಾರು 75 ಲಕ್ಷ ಮೌಲ್ಯದ ನಾಲ್ಕು ವಾಚುಗಳನ್ನು ಕಸ್ಟಮ್ಸ್ ಗೆ ಮಾಹಿತಿ ನೀಡದೇ ಒಯ್ಯುತ್ತಿದ್ದ ಕಾರಣಕ್ಕೆ ಕೃನಾಲ್ ರನ್ನು ತಡೆದಿದ್ದ ಅಧಿಕಾರಿಗಳು ವಿಚಾರಣೆಗೊಳಪಡಿಸಿದ್ದರು. ಆದರೆ ಇಷ್ಟಕ್ಕೇ ಈ ಪ್ರಕರಣ ಮುಗಿದಿಲ್ಲ. ಮುಂಬೈ ಕಸ್ಟಮ್ಸ್ ವಿಭಾಗದ ಅಧಿಕಾರಿಗಳು ಕೃನಾಲ್ ರನ್ನು ಇನ್ನಷ್ಟು ವಿಚಾರಣೆಗೊಳಪಡಿಸುವ ಸಾಧ‍್ಯತೆಯಿದೆ ಎನ್ನಲಾಗಿದೆ. ವಿಚಾರಣೆ ವೇಳೆ ಕೃನಾಲ್ ತನಗೆ ಇದನ್ನು ಕಸ್ಟಮ್ಸ್ ಗೆ ಮಾಹಿತಿ ನೀಡಬೇಕೆಂದು ಗೊತ್ತಿರಲಿಲ್ಲ. ದಂಡ ಕಟ್ಟಲು ತಯಾರಿರುವುದಾಗಿ ಹೇಳಿದ್ದರು ಎನ್ನಲಾಗಿದೆ.