Publish Date: Thu, 05 Nov 2020 (10:20 IST)
Updated Date: Thu, 05 Nov 2020 (10:22 IST)
ದುಬೈ: ಮತ್ತೆ ರೋಹಿತ್ ಶರ್ಮಾ ಗಾಯದ ಬಗ್ಗೆ ಹೊಸ ಅನುಮಾನ ಹುಟ್ಟಿಕೊಂಡಿದೆ. ಮಾಧ್ಯಮಗಳಿಗೆ ಹೇಳಿಕೆ ನೀಡಿರುವ ಮುಂಬೈ ಇಂಡಿಯನ್ಸ್ ನಾಯಕ ರೋಹಿತ್ ಶರ್ಮಾ ನನಗೆ ಮಂಡಿನೋವಿಲ್ಲ, ಆರಾಮವಾಗಿದ್ದೇನೆ ಎಂದಿದ್ದಾರೆ.
ಇದಕ್ಕೂ ಮೊದಲು ಟೀಂ ಇಂಡಿಯಾಗೆ ಮಂಡಿನೋವಿನ ಕಾರಣದಿಂದ ರೋಹಿತ್ ರನ್ನು ಆಯ್ಕೆ ಮಾಡಲಾಗಿರಲಿಲ್ಲ. ಈ ಬಗ್ಗೆ ಬಿಸಿಸಿಐ ವೈದ್ಯಕೀಯ ತಂಡವೂ ಸರ್ಟಿಫಿಕೇಟ್ ನೀಡಿತ್ತು. ಆದರೆ ಕಳೆದ ಪಂದ್ಯದಲ್ಲಿ ರೋಹಿತ್ ಮುಂಬೈ ಇಂಡಿಯನ್ಸ್ ಪರ ಐಪಿಎಲ್ ಆಡಿದ್ದರು. ಆದರೆ ನಾನೀಗ ಸುಧಾರಿಸಿಕೊಂಡಿದ್ದೇನೆ, ನನಗೀಗ ಮಂಡಿ ನೋವಿಲ್ಲ ಎಂದು ಹೇಳಿದ್ದಾರೆ! ಹಾಗಿದ್ದರೆ ಬಿಸಿಸಿಐ ವೈದ್ಯಕೀಯ ತಂಡ ಅವರ ಗಾಯದ ತೀವ್ರತೆಯನ್ನು ತಪ್ಪಾಗಿ ವರದಿ ನೀಡಿದೆಯೇ ಎಂಬ ಅನುಮಾನ ಶುರುವಾಗಿದೆ.