ಸಿಡ್ನಿ: ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಾಳೆಯಿಂದ ಟೆಸ್ಟ್ ಸರಣಿ ಆರಂಭವಾಗಲಿದೆ. ಆದರೆ ಅದಕ್ಕೂ ಮೊದಲು ಟೀಂ ಇಂಡಿಯಾ ಆರಂಭಿಕ ಸ್ಥಾನಕ್ಕೆ ಯಾರು ಸೂಕ್ತ ಎಂಬ ಚರ್ಚೆ ಜೋರಾಗಿದೆ.
ರೋಹಿತ್ ಶರ್ಮಾ ಅನುಪಸ್ಥಿತಿಯಲ್ಲಿ ಮಯಾಂಕ್ ಅಗರ್ವಾಲ್ ಜತೆಗೆ ರಾಹುಲ್ ಆರಂಭಿಕರಾಗಬೇಕೋ ಅಥವಾ ಯುವ ಬ್ಯಾಟ್ಸ್ ಮನ್ ಶಬ್ನಂ ಗಿಲ್ ಗೆ ಅವಕಾಶ ನೀಡಬೇಕೋ ಎಂಬ ಚರ್ಚೆ ನಡೆದಿದೆ. ಹಿರಿಯ ಕ್ರಿಕೆಟಿಗರಾದ ಸುನಿಲ್ ಗವಾಸ್ಕರ್ ಮತ್ತು ಅಲನ್ ಬಾರ್ಡರ್ ಶಬ್ನಂ ಗಿಲ್ ಅಭ್ಯಾಸ ಪಂದ್ಯದಲ್ಲಿ ಉತ್ತಮ ಪ್ರದರ್ಶನ ತೋರಿದ್ದಾರೆ. ಹೀಗಾಗಿ ಅವರನ್ನು ಆರಂಭಿಕರಾಗಿ ಕಣಕ್ಕಿಳಿಸುವುದು ಸೂಕ್ತ ಎಂದಿದ್ದಾರೆ. ಆಕಾಶ್ ಚೋಪ್ರಾ ಅಂತೂ ಕೆಎಲ್ ರಾಹುಲ್ ಮೊದಲ ಟೆಸ್ಟ್ ನಲ್ಲಿ ಆಡುವುದೇ ಅನುಮಾನ ಎಂದಿದ್ದಾರೆ. ರಾಹುಲ್ ಆಡಿದರೂ ಅವರಿಗೆ ಆರಂಭಿಕ ಸ್ಥಾನ ಸಿಗುವುದು ಅನುಮಾನವೆನಿಸುತ್ತಿದೆ.