Publish Date: Sat, 12 Dec 2020 (17:26 IST)
Updated Date: Sat, 12 Dec 2020 (17:28 IST)
ಸಿಡ್ನಿ: ಆಸ್ಟ್ರೇಲಿಯಾ ಎ ತಂಡದ ವಿರುದ್ಧದ ಅಭ್ಯಾಸ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಬ್ಯಾಟ್ಸ್ ಮನ್ ಗಳು ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ.
ದ್ವಿತೀಯ ಇನಿಂಗ್ಸ್ ನಲ್ಲಿ ಇಂದಿನ ದಿನದಂತ್ಯಕ್ಕೆ ಟೀಂ ಇಂಡಿಯಾ 4 ವಿಕೆಟ್ ನಷ್ಟಕ್ಕೆ 386 ರನ್ ಗಳಿಸಿದೆ. ಈ ಪೈಕಿ ಹನುಮ ವಿಹಾರಿ ಮತ್ತು ರಿಷಬ್ ಪಂತ್ ಶತಕ ಗಳಿಸಿ ಅಜೇಯರಾಗುಳಿದಿದ್ದಾರೆ. ಹನುಮ ವಿಹಾರಿ 104 ರನ್ ಗಳಿಸಿದ್ದರೆ, ರಿಷಬ್ 103 ರನ್ ಗಳಿಸಿದ್ದಾರೆ. ಭಾರತ ಈಗಾಗಲೇ ದ್ವಿತೀಯ ಇನಿಂಗ್ಸ್ ನಲ್ಲಿ 472 ರನ್ ಗಳ ಮುನ್ನಡೆ ಸಾಧಿಸಿದೆ. ಇದಕ್ಕೂ ಮೊದಲು ಶಬ್ನಂ ಗಿಲ್ 65 ಮತ್ತು ಮಯಾಂಕ್ ಅಗರ್ವಾಲ್ 61 ರನ್ ಗಳಿಸಿ ಔಟಾಗಿದ್ದರು.