Publish Date: Thu, 11 Mar 2021 (09:13 IST)
Updated Date: Thu, 11 Mar 2021 (09:15 IST)
ಅಹಮ್ಮದಾಬಾದ್: ಭಾರತ ಮತ್ತು ಇಂಗ್ಲೆಂಡ್ ನಡುವಿನ ಟಿ20 ಸರಣಿ ನಾಳೆಯಿಂದ ಆರಂಭವಾಗಲಿದ್ದು, ಮೊದಲ ಟಿ20 ಪಂದ್ಯಕ್ಕೆ ಟೀಂ ಇಂಡಿಯಾ ಆಡುವ ಬಳಗಕ್ಕೆ ರಿಷಬ್ ಪಂತ್ ಸೇರಿಕೊಳ್ಳುವ ಸಾಧ್ಯತೆಯಿದೆ.
ಕಳೆದ ಕೆಲವು ಸರಣಿಗಳಲ್ಲಿ ಟೀಂ ಇಂಡಿಯಾದಲ್ಲಿ ಕೆಎಲ್ ರಾಹುಲ್ ವಿಕೆಟ್ ಕೀಪರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ಹೀಗಾಗಿ ಅವರಿಗೆ ಆರಂಭಿಕ ಸ್ಥಾನವಲ್ಲದಿದ್ದರೂ ಮಧ್ಯಮ ಕ್ರಮಾಂಕದಲ್ಲಿ ಅವಕಾಶ ಸಿಗುತ್ತಿತ್ತು. ಆದರೆ ಈ ಬಾರಿ ರಿಷಬ್ ಪಂತ್ ಆಡುವ ಬಳಗಕ್ಕೆ ಬಂದರೆ ವಿಕೆಟ್ ಕೀಪರ್ ಸ್ಥಾನ ಸಿಗದು.
ಅತ್ತ ಮಧ್ಯಮ ಕ್ರಮಾಂಕದಲ್ಲಿ ರಾಹುಲ್ ಆಡಬೇಕಾದರೆ ಅವರಿಗೆ ಸ್ಥಾನ ಬಿಟ್ಟುಕೊಡುವವರು ಯಾರು ಎಂದು ಕಾದು ನೋಡಬೇಕಿದೆ. ಅಥವಾ ಹಾರ್ದಿಕ್ ಪಾಂಡ್ಯರನ್ನು ಹೊರಗಿಡುವ ರಿಸ್ಕ್ ಟೀಂ ಇಂಡಿಯಾ ತೆಗೆದುಕೊಳ್ಳಬಹುದೇ ಎಂಬ ಪ್ರಶ್ನೆ ಕಾಡುತ್ತಿದೆ. ಒಟ್ಟಿನಲ್ಲಿ ಆಡುವ ಬಳಗದ ಅಂತಿಮ ಆಯ್ಕೆ ಟೀಂ ಇಂಡಿಯಾಗೆ ದೊಡ್ಡ ಸವಾಲಾಗಲಿದೆ.