ಅಹಮ್ಮದಾಬಾದ್: ಟೀಂ ಇಂಡಿಯಾ ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಗೆ ಸಿದ್ಧತೆ ನಡೆಸಿರುವಾಗಲೇ ಟಿ ನಟರಾಜನ್ ರೂಪದಲ್ಲಿ ಶಾಕ್ ಎದುರಾಗಿದೆ.
ಯುವ ವೇಗಿ ಟಿ ನಟರಾಜನ್ ಭುಜದ ಗಾಯಕ್ಕೊಳಗಾಗಿದ್ದಾರೆ. ಹೀಗಾಗಿ ಅವರು ಎನ್ ಸಿಎನಲ್ಲಿ ಪುನಶ್ಚೇತನ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಹೀಗಾಗಿ ಅವರು ಮತ್ತೆ ಟೀಂ ಇಂಡಿಯಾಕ್ಕೆ ಕೂಡಿಕೊಳ್ಳಲು ಬಯೋ ಬಬಲ್ ಪ್ರದೇಶದಲ್ಲಿ ಕಳೆಯಬೇಕಾಗಿದೆ.
ಆದರೆ ಇದಕ್ಕೆ ಸಮಯದ ಅಭಾವವಿದೆ. ಹೀಗಾಗಿ ಅವರು ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಗೆ ತಂಡಕ್ಕೆ ಲಭ್ಯವಾಗುವುದು ಅನುಮಾನವಾಗಿದೆ. ಅತ್ತ ಯುವ ಬೌಲರ್ ವರುಣ್ ಚಕ್ರವರ್ತಿ ಫಿಟ್ನೆಸ್ ಟೆಸ್ಟ್ ನಲ್ಲಿ ವಿಫಲರಾಗಿದ್ದಾರೆ. ಹೀಗಾಗಿ ಅವರು ಮತ್ತೆ ಫಿಟ್ನೆಸ್ ಟೆಸ್ಟ್ ನಲ್ಲಿ ಪಾಸಾದರೆ ಮಾತ್ರ ತಂಡಕ್ಕೆ ಮರಳಬಹುದಾಗಿದೆ.