Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಮುಂಬೈ: ಟೀಂ ಇಂಡಿಯಾ ಎಂದರೆ ಇನ್ನು ಎರಡು ತಂಡಗಳಾಗುವ ದಿನ ದೂರವಿಲ್ಲ. ಈ ಬಗ್ಗೆ ಕೋಚ್ ರವಿಶಾಸ್ತ್ರಿ ಸುಳಿವೊಂದನ್ನು ನೀಡಿದ್ದಾರೆ.
ಕೊರೋನಾ ಬಳಿಕ ಟೀಂ ಇಂಡಿಯಾ ಕ್ರಿಕೆಟ್ ನಲ್ಲಿ ಬ್ಯುಸಿಯಾಗಿದೆ. ಜೊತೆಗೆ ಸಾಕಷ್ಟು ಪ್ರತಿಭಾವಂತರೂ ಹುಟ್ಟಿಕೊಂಡಿದ್ದಾರೆ. ಈ ಎಲ್ಲರಿಗೂ ಅವಕಾಶ ಸಿಗುವುದರ ಜೊತೆಗೆ ಮುಖ್ಯ ಆಟಗಾರರಿಗೆ ಅಗತ್ಯ ಬಂದಾಗ ವಿಶ್ರಾಂತಿ ನೀಡಲು ಇನ್ನು ಮುಂದೆ ಟೀಂ ಇಂಡಿಯಾದಲ್ಲಿ ಎರಡು ಆಡುವ 11 ರ ಬಳಗವನ್ನು ಆಯ್ಕೆ ಮಾಡಬಹುದು ಎಂದು ಕೋಚ್ ರವಿಶಾಸ್ತ್ರಿ ಹೇಳಿದ್ದಾರೆ.
ಆಸ್ಟ್ರೇಲಿಯಾ ಸರಣಿಯ ಬಳಿಕ ಸಾಕಷ್ಟು ಹೊಸ ಆಟಗಾರರು ತಂಡಕ್ಕೆ ಸಿಕ್ಕಿದ್ದಾರೆ. ಈಗ ಕೊರೋನಾದಿಂದಾಗಿ ಹೆಚ್ಚು ಸಂಖ್ಯೆಯ ಆಟಗಾರರು ತಂಡದಲ್ಲಿರುತ್ತಾರೆ. ಇವರಿಗೆಲ್ಲಾ ಅವಕಾಶ ಸಿಗಲು ಎರಡು ತಂಡಗಳನ್ನು ಕಟ್ಟಿಕೊಳ್ಳಬಹುದು. ಇದರಿಂದ ಎಲ್ಲಾ ಆಟಗಾರರಿಗೂ ಸಾಕಷ್ಟು ವಿಶ್ರಾಂತಿ ಸಿಗುತ್ತದೆ ಎನ್ನುವುದು ರವಿಶಾಸ್ತ್ರಿ ಅಭಿಮತ.