ಕೋಪದ ಭರದಲ್ಲಿ ಶತಕ ಗಳಿಸಿದ ರಿಷಬ್ ಪಂತ್!

Webdunia
ಮಂಗಳವಾರ, 15 ಡಿಸೆಂಬರ್ 2020 (09:54 IST)
ಸಿಡ್ನಿ: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಅಭ್ಯಾಸ ಟೆಸ್ಟ್ ಪಂದ್ಯದಲ್ಲಿ ಶತಕಗಳಿಸಿದ ಗುಟ್ಟನ್ನು ಟೀಂ ಇಂಡಿಯಾ ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ರಿಷಬ್ ಪಂತ್ ಹೊರಹಾಕಿದ್ದಾರೆ.


ಈ ಪಂದ್ಯದಲ್ಲಿ ರಿಷಬ್ ಸಿಟ್ಟಿನ ಭರದಲ್ಲಿ ಶತಕ ಗಳಿಸಿದ್ದರಂತೆ! ಹಾಗಂತ ಅವರೇ ಹೇಳಿಕೊಂಡಿದ್ದಾರೆ. ದೀರ್ಘ ಕಾಲದಿಂದ ಫಾರ್ಮ್ ಕಳೆದುಕೊಂಡು ಒದ್ದಾಡುತ್ತಿದ್ದ ರಿಷಬ್ ಈ ಪಂದ್ಯದಲ್ಲಿ 81 ರನ್ ಗಳಿಸಿ ಬ್ಯಾಟಿಂಗ್ ಮಾಡುತ್ತಿದ್ದರು. ಆಗ ದಿನದಂತ್ಯವಾಗಲು ಒಂದು ಓವರ್ ಬಾಕಿಯಿತ್ತಷ್ಟೇ. ಹೀಗಾಗಿ ಶತಕ ಗಳಿಸುವ ಯೋಚನೆಯೇ ಅವರಿಗಿರಲಿಲ್ಲ. ಆದರೆ ಕೊನೆಯ ಓವರ್ ನ ಮೊದಲ ಎಸೆತ ಅವರ ಹೊಟ್ಟೆಗೆ ಬಡಿದಿತ್ತು. ಇದು ಅವರ ಆಕ್ರೋಶ ಹೆಚ್ಚಿಸಿತ್ತು. ಈ ಸಿಟ್ಟಿನ ಭರದಲ್ಲಿ ಮುಂದಿನ ಎಸೆತಗಳಲ್ಲಿ ನಾಲ್ಕು ಬೌಂಡರಿ ಒಂದು ಸಿಕ್ಸರ್ ಸಮೇತ 22 ರನ್ ಚಚ್ಚಿ ಶತಕ ಪೂರ್ತಿ ಮಾಡಿದರಂತೆ. ಈ ಶತಕ ತನಗೆ ಶಕ್ತಿವರ್ಧಕವಾಯಿತು ಎಂದು ಅವರು ಹೇಳಿಕೊಂಡಿದ್ದಾರೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಪಡ್ಡೆ ಹುಡುಗರ ಕಾಟಕ್ಕೆ ಚಿಯರ್‌ ಲೀಡರ್‌ಗಳು ಫುಲ್ ಗರಂ' ಏಕಾನಾ ಸ್ಟೇಡಿಯಂನಲ್ಲಿ ಸುಂದರಿಯರು ಕೋಪಗೊಳ್ಳಲು ಕಾರಣವೇನು ಗೊತ್ತಾ, Video

ನನ್ನ ಕಾಪಿ ಮಾಡ್ತಿದ್ದೀಯಾ.. ಬಹಿರಂಗವಾಗಿಯೇ ಶುಭಮನ್ ಗಿಲ್ ಕಾಲೆಳೆದ ಕೊಹ್ಲಿ Video

IPL 2026: ಕ್ವಾಲಿಫೈಯರ್ ಮತ್ತು ಎಲಿಮಿನೇಟರ್ ಪಂದ್ಯದ ವೇಳಾಪಟ್ಟಿ ಇಲ್ಲಿದೆ

IPL 2026: ಐಪಿಎಲ್‌ನ ಲೀಗ್‌ ಹಂತಕ್ಕೆ ತೆರೆ: ಕೊನೆಯ ಪಂದ್ಯದಲ್ಲಿ ಕೆಕೆಆರ್‌ ವಿರುದ್ಧ ಅಬ್ಬರಿಸಿದ ಡೆಲ್ಲಿ ಕ್ಯಾಪಿಟಲ್ಸ್‌

IPL 2026: ಮುಂಬೈ ಇಂಡಿಯನ್ಸ್‌ ತಂಡವನ್ನು ಬಗ್ಗುಬಡಿದು ಪ್ಲೇ ಆಫ್‌ಗೆ ರಾಜಸ್ಥಾನ ರಾಯಲ್ಸ್‌ ಎಂಟ್ರಿ

ಮುಂದಿನ ಸುದ್ದಿ
Show comments