Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಜೊಹಾನ್ಸ್ ಬರ್ಗ್: ದ.ಆಫ್ರಿಕಾ ವಿರುದ್ಧದ ದ್ವಿತೀಯ ಟೆಸ್ಟ್ ಪಂದ್ಯಕ್ಕೆ ಭಾರತೀಯ ತಂಡ ತಯಾರಾಗುತ್ತಿದ್ದು ಕಠಿಣ ತಾಲೀಮು ನಡೆಸಿದೆ. ಅದರಲ್ಲೂ ವಿಶೇಷವಾಗಿ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ತಮ್ಮ ಬತ್ತಳಿಕೆಯಲ್ಲಿ ಹೊಸದೊಂದು ಬಾಣ ಸಿದ್ಧಪಡಿಸಿದ್ದಾರೆ.
ಅಂತಹದ್ದೇನು ಹೊಸ ಅಸ್ತ್ರ ಅಂತೀರಾ? ಹೇಳಿ ಕೇಳಿ ಆಫ್ರಿಕನ್ ಪಿಚ್ ಗಳು ವೇಗಿಗಳ ಸ್ವರ್ಗ ಎನ್ನುವುದು ಮೊದಲ ಟೆಸ್ಟ್ ಪಂದ್ಯದಲ್ಲೇ ಸಾಬೀತಾಗಿದೆ. ಇದರಿಂದಾಗಿ ಸ್ಪಿನ್ನರ್ ಗಳಿಗೆ ಕೆಲಸವೇ ಇಲ್ಲದಂತಾಗಿದೆ.
ಹೀಗಾಗಿ ಸ್ಪಿನ್ನರ್ ಅಶ್ವಿನ್ ವೇಗಿಯಾಗಿ ಪರಿವರ್ತನೆಯಾಗಿದ್ದಾರೆ. ಹಿರಿಯ ಸ್ಪಿನ್ನರ್ ನೆಟ್ಸ್ ನಲ್ಲಿ ವೇಗದ ಬೌಲಿಂಗ್ ಅಭ್ಯಾಸ ನಡೆಸಿದ್ದಾರೆ. ವೇಗ ಮತ್ತು ಸ್ಪಿನ್ನರ್ ನ ಮಿಶ್ರಣದಂತೆ ಬೌಲಿಂಗ್ ಅಭ್ಯಾಸ ನಡೆಸಿದ್ದಾರೆ. ಇದನ್ನು ಸ್ವತಃ ವೇಗಿ ಉಮೇಶ್ ಯಾದವ್, ಸಹಾಯಕ ತರಬೇತುದಾರರು ವೀಕ್ಷಣೆ ಮಾಡಿದ್ದಾರೆ. ಈ ಅಸ್ತ್ರವನ್ನು ಅಶ್ವಿನ್ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಬಳಸುತ್ತಾರಾ ಕಾದು ನೋಡಬೇಕು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ