Publish Date: Fri, 12 Jan 2018 (07:49 IST)
Updated Date: Fri, 12 Jan 2018 (07:52 IST)
ಜೊಹಾನ್ಸ್ ಬರ್ಗ್: ದ.ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಪ್ರತಿಭಾವಂತ ಕನ್ನಡಿಗ ಬ್ಯಾಟ್ಸ್ ಮನ್ ಕೆಎಲ್ ರಾಹುಲ್ ಗೆ ಅವಕಾಶ ನೀಡದ ವಿರಾಟ್ ಕೊಹ್ಲಿ ನಿರ್ಧಾರ ಸಾಕಷ್ಟು ಟೀಕೆಗೆ ಒಳಗಾಗಿತ್ತು. ಇದೀಗ ಸೋತ ಮೇಲೆ ಬುದ್ಧಿ ಬಂತು ಎನ್ನುವಂತೆ ಕೊಹ್ಲಿ ದ್ವಿತೀಯ ಟೆಸ್ಟ್ ಗೆ ರಾಹುಲ್ ಗೆ ಅವಕಾಶ ನೀಡಲಿದ್ದಾರೆ ಎಂಬ ಸುಳಿವು ಸಿಕ್ಕಿದೆ.
ಈ ಬಗ್ಗೆ ತಂಡದ ಮೂಲಗಳನ್ನು ಆಧರಿಸಿ ಆಂಗ್ಲ ಮಾಧ್ಯವೊಂದು ವರದಿ ಮಾಡಿದ್ದು, ಶನಿವಾರದಿಂದ ಆರಂಭವಾಗಲಿರುವ ದ್ವಿತೀಯ ಟೆಸ್ಟ್ ಪಂದ್ಯಕ್ಕೆ ಮುರಳಿ ವಿಜಯ್ ಗೆ ಕೊಕ್ ಕೊಟ್ಟು ರಾಹುಲ್ ಗೆ ಅವಕಾಶ ನೀಡುವ ಸಾಧ್ಯತೆ ದಟ್ಟವಾಗಿದೆ ಎನ್ನಲಾಗಿದೆ.
ಮುರಳಿ ವಿಜಯ್ ಫೀಲ್ಡಿಂಗ್ ನಲ್ಲೂ ಚುರುಕಾಗಿ ಕೆಲಸ ಮಾಡದೇ ಇರುವುದರಿಂದ ಅವರು ಸ್ಥಾನ ಕಳೆದುಕೊಳ್ಳುವ ಸಾಧ್ಯತೆಯಿದೆ ಎನ್ನಲಾಗಿದೆ. ಲೆಫ್ಟ್ ಮತ್ತು ರೈಟ್ ಕಾಂಬಿನೇಷನ್ ಬೇಕು ಎನ್ನುವ ಕಾರಣಕ್ಕೆ ಎಡಗೈ ಆಟಗಾರ ಧವನ್ ರನ್ನು ಉಳಿಸಿಕೊಳ್ಳುವ ಸಾಧ್ಯತೆ ಇದೆ. ಹೀಗಾಗದರೆ ವಿಜಯ್ ಸ್ಥಾನ ಬಿಟ್ಟುಕೊಡಬೇಕಾದೀತು. ಅಂತೂ ಕೊನೆಗೂ ಕೆಎಲ್ ರಾಹುಲ್ ಗೆ ತಂಡದಲ್ಲಿ ಸ್ಥಾನ ಸಿಗುವ ಸುದ್ದಿ ಕನ್ನಡಿಗ ಅಭಿಮಾನಿಗಳಲ್ಲಿ ಸಂತಸ ಮೂಡಿಸಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ