Publish Date: Tue, 21 Jan 2020 (11:01 IST)
Updated Date: Tue, 21 Jan 2020 (11:02 IST)
ಬೆಂಗಳೂರು: ಗಾಯಗೊಂಡು ಸದ್ಯಕ್ಕೆ ಟೀಂ ಇಂಡಿಯಾದಿಂದ ಹೊರಗುಳಿದಿರುವ ಹಾರ್ದಿಕ್ ಪಾಂಡ್ಯ ಬೆಂಗಳೂರಿನ ಎನ್ ಸಿಎಯಲ್ಲಿ ರಾಹುಲ್ ದ್ರಾವಿಡ್ ಗರಡಿಯಲ್ಲಿ ಪಳಗಲಿದ್ದಾರೆ.
ಇತ್ತೀಚೆಗೆ ನಡೆಸಿದ ಫಿಟ್ನೆಸ್ ಪರೀಕ್ಷೆಯಲ್ಲಿ ವಿಫಲರಾಗಿದ್ದ ಹಾರ್ದಿಕ್ ನ್ಯೂಜಿಲೆಂಡ್ ಸರಣಿಯಿಂದ ಹೊರಬಿದ್ದಿದ್ದಾರೆ. ಇದೀಗ ಎನ್ ಸಿಎಯಲ್ಲಿ ಪುನಶ್ಚೇತನ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಹಾರ್ದಿಕ್ ದ್ರಾವಿಡ್ ಬಳಿ ತರಬೇತಿ ಪಡೆಯಲಿದ್ದಾರೆ.
ಭಾರತ ಎ ತಂಡದಲ್ಲಿದ್ದಾಗ ದ್ರಾವಿಡ್ ಕೋಚ್ ಆಗಿ ಪಾಂಡ್ಯಗೆ ತರಬೇತಿ ನೀಡಿದ್ದರು. ಇದೀಗ ಮತ್ತೆ ಟೀಂ ಇಂಡಿಯಾಕ್ಕೆ ಮರಳಲೂ ದ್ರಾವಿಡ್ ಸಲಹೆ, ಸೂಚನೆಯಂತೇ ತರಬೇತಿ ಪಡೆಯಲಿದ್ದಾರೆ.