Select Your Language

Notifications

webdunia
webdunia
webdunia
webdunia

ಕೊಹ್ಲಿಯ ಚಮಚಾ ನೀನು ಎಂದವನಿಗೆ ತಿರುಗೇಟು ಕೊಟ್ಟ ಆಕಾಶ್ ಚೋಪ್ರಾ

ವಿರಾಟ್ ಕೊಹ್ಲಿ
ಮುಂಬೈ: ಕ್ರಿಕೆಟ್ ಕಾಮೆಂಟೇಟರ್ ಆಕಾಶ್ ಚೋಪ್ರಾರಿಗೆ ನೀವು ವಿರಾಟ್ ಕೊಹ್ಲಿಯ ಚಮಚಾ ಎಂದು ಟ್ವಿಟರಿಗರೊಬ್ಬರು ಲೇವಡಿ ಮಾಡಿದ್ದಾರೆ. ಇದಕ್ಕೆ ಚೋಪ್ರಾ ಸರಿಯಾಗಿ ತಿರುಗೇಟು ಕೊಟ್ಟಿದ್ದಾರೆ.


ಆಸ್ಟ್ರೇಲಿಯಾ ವಿರುದ್ಧ ಮೂರನೇ ಏಕದಿನ ಪಂದ್ಯದಲ್ಲಿ ಮನೀಶ್ ಪಾಂಡೆ ಒಂದೇ ಕೈಯಿಂದ ಅದ್ಭುತ ಕ್ಯಾಚ್ ಪಡೆದು ಡೇವಿಡ್ ವಾರ್ನರ್ ಔಟಾಗಲು ಕಾರಣವಾಗಿದ್ದರು. ಆದರೆ ಇದರ ಬಗ್ಗೆ ಸೊಲ್ಲೆತ್ತದೇ ವಿರಾಟ್ ಕೊಹ್ಲಿ ಪಡೆದ ಕ್ಯಾಚ್ ಬಗ್ಗೆ ಟ್ವಿಟರ್ ನಲ್ಲಿ ಆಕಾಶ್ ಚೋಪ್ರಾ ಹೊಗಳಿದ್ದರು.

ಇದಕ್ಕೆ ಟ್ವಿಟರಿಗರೊಬ್ಬರು ‘ಹಲೋ ವಿರಾಟ್ ಕೊಹ್ಲಿಯ ಚಮಚಾ, ಮನೀಶ್ ಪಾಂಡೆ ಒಂದೇ ಕೈಯಿಂದ  ಅದ್ಭುತ ಕ್ಯಾಚ್ ಪಡೆದೂ ಅವರ ಬಗ್ಗೆ ಒಂದೇ ಒಂದು ಮಾತು ಹೇಳಿಲ್ಲ ಯಾಕೆ’ ಎಂದು ಪ್ರತಿಕ್ರಿಯಿಸಿದ್ದರು. ‘ನಾನು ಇನ್ನು ಮುಂದೆ ಪ್ರತಿಯೊಬ್ಬರೂ ಕ್ಯಾಚ್ ಪಡೆದಾಗಲೂ ಟ್ವೀಟ್ ಮಾಡಿ ಹೊಗಳುತ್ತೇನೆ. ಮನೀಶ್ ಕ್ಯಾಚ್ ಪಡೆದಾಗ ನಾನು ಕಾಮೆಂಟರಿ ಹೇಳುತ್ತಿದ್ದೆ. ಕಾಮೆಂಟರಿ ಮಾಡುವಾಗ ನಾನು ಟ್ವಿಟರ್ ಬಳಸಲ್ಲ’ ಎಂದು ತಿರುಗೇಟಿನ ಜತೆಗೆ ಸ್ಪಷ್ಟನೆಯನ್ನೂ ಕೊಟ್ಟಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ರಿಷಬ್ ಪಂತ್ ಗೆ ಬಾಗಿಲು ಬಂದ್ ಮಾಡಿದ ಕೆಎಲ್ ರಾಹುಲ್!