ಕೊಲೊಂಬೋ: ಶ್ರೀಲಂಕಾ ಪ್ರವಾಸಕ್ಕೆ ಟೀಂ ಇಂಡಿಯಾದ ಕೋಚ್ ಆಗಿದ್ದ ವಾಲ್ ರಾಹುಲ್ ದ್ರಾವಿಡ್ ಮುಂದೊಂದು ದಿನ ಪರ್ಮನೆಂಟ್ ಕೋಚ್ ಆಗುವ ಬಗ್ಗೆ ಪರೋಕ್ಷವಾಗಿ ಪ್ರತಿಕ್ರಿಯಿಸಿದ್ದಾರೆ.
ದ್ರಾವಿಡ್ ಪರ್ಮನೆಂಟ್ ಆಗಿ ಟೀಂ ಇಂಡಿಯಾ ಕೋಚ್ ಆಗಬೇಕೆಂಬುದು ಅಭಿಮಾನಿಗಳ ಬಯಕೆ. ಆದರೆ ಈ ಬಗ್ಗೆ ಪ್ರತಿಕ್ರಿಯಿಸಿರುವ ದ್ರಾವಿಡ್ ಈ ಸರಣಿಯನ್ನು ಎಂಜಾಯ್ ಮಾಡಿದೆ. ಇದನ್ನು ಬಿಟ್ಟು ಭವಿಷ್ಯದ ಬಗ್ಗೆ ನಾನೇನೂ ಯೋಚನೆಯನ್ನೇ ಮಾಡಲಿಲ್ಲ ಎಂದಿದ್ದಾರೆ.
ಆ ಮೂಲಕ ಭವಿಷ್ಯದಲ್ಲಿ ಟೀಂ ಇಂಡಿಯಾ ಕೋಚ್ ಆಗುವ ಯೋಚನೆ ತಮ್ಮ ಮುಂದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಇದೇ ವರ್ಷ ರವಿಶಾಸ್ತ್ರಿ ಗುತ್ತಿಗೆ ಅವಧಿ ಮುಗಿಯಲಿದ್ದು, ಆ ಬಳಿಕ ಹೊಸ ಕೋಚ್ ಯಾರಾಗಬಹುದು ಎಂಬ ಕುತೂಹಲ ಎಲ್ಲರಲ್ಲಿದೆ.