Publish Date: Sat, 31 Jul 2021 (09:30 IST)
Updated Date: Sat, 31 Jul 2021 (09:31 IST)
ರಾಂಚಿ: ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಧೋನಿ ಪ್ರತೀ ಬಾರಿ ಐಪಿಎಲ್ ಗೆ ಒಂದೊಂದು ಹೇರ್ ಸ್ಟೈಲ್ ಮೂಲಕ ಜನರನ್ನು ಸೆಳೆಯುತ್ತಾರೆ.
ಇನ್ನೇನು ಕೆಲವೇ ದಿನಗಳಲ್ಲಿ ಐಪಿಎಲ್ 14 ರ ಉಳಿದ ಪಂದ್ಯಗಳು ಯುಎಇನಲ್ಲಿ ನಡೆಯಲಿವೆ. ಅದಕ್ಕೂ ಮೊದಲು ಧೋನಿ ಮತ್ತೊಂದು ಹೇರ್ ಸ್ಟೈಲ್ ನಲ್ಲಿ ಮಿಂಚಿದ್ದಾರೆ.
ಧೋನಿಯ ಹೊಸ ವಿಶಿಷ್ಟ ಹೇರ್ ಸ್ಟೈಲ್ ಜೊತೆಗೆ ದಾಡಿ ಬಿಟ್ಟುಕೊಂಡ ಫೋಟೋಗಳು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಎಂದಿನಂತೇ ಅವರ ಮೆಚ್ಚಿನ ಆಲಿಂ ಹಕೀಂ ಈ ಹೊಸ ವಿನ್ಯಾಸ ನೀಡಿದ್ದಾರೆ. ಈ ಹೇರ್ ಸ್ಟೈಲ್ ನಲ್ಲಿ ಅವರು ಮತ್ತಷ್ಟು ಯಂಗ್ ಆಗಿ ಕಾಣಿಸುತ್ತಿದ್ದಾರೆ ಎನ್ನುವುದು ವಿಶೇಷ.