Publish Date: Wed, 30 Aug 2017 (09:33 IST)
Updated Date: Wed, 30 Aug 2017 (09:35 IST)
ಲಂಡನ್: ಲಂಕಾ ವಿರುದ್ಧದ ಏಕದಿನ ಸರಣಿಯಿಂದ ಹೊರಗುಳಿದಿರುವ ಟೀಂ ಇಂಡಿಯಾ ಸ್ಪಿನ್ನರ್ ಆರ್ ಅಶ್ವಿನ್ ಇದೀಗ ಇಂಗ್ಲೆಂಡ್ ನ ಕೌಂಟಿ ಕ್ರಿಕೆಟ್ ನಲ್ಲಿ ಖಾತೆ ತೆರೆದಿದ್ದಾರೆ.
ವಾರ್ಸೆಸ್ಟರ್ ಶೈರ್ ಕೌಂಟಿ ತಂಡದ ಪರ ಆಡುತ್ತಿರುವ ಅಶ್ವಿನ್ ಗ್ಲಾಸೆಸ್ಟರ್ ಶೈರ್ ತಂಡದ ಗ್ಯಾರೆಥ್ ರೋಡ್ರಿಕ್ ರನ್ನು ಔಟ್ ಮಾಡುವ ಮೂಲಕ ಕೌಂಟಿ ಕ್ರಿಕೆಟ್ ನಲ್ಲ ಮೊದಲ ಬಲಿ ಪಡೆದಿದ್ದಾರೆ.
ಇದೇ ಮೊದಲ ಬಾರಿಗೆ ಕೌಂಟಿ ಆಡುತ್ತಿರುವ ಅಶ್ವಿನ್ ತಮ್ಮ ಬೌಲಿಂಗ್ ನಲ್ಲಿ ತಾವೇ ಕ್ಯಾಚ್ ಮಾಡುವ ಮೂಲಕ ಮೊದಲ ವಿಕೆಟ್ ಪಡೆದರು. ಸದ್ಯಕ್ಕೆ ಅಶ್ವಿನ್ ಜತೆಗೆ ಚೇತೇಶ್ವರ ಪೂಜಾರ ಕೂಡಾ ಕೌಂಟಿ ಕ್ರಿಕೆಟ್ ಆಡುತ್ತಿದ್ದಾರೆ.
Krishnaveni
Publish Date: Wed, 30 Aug 2017 (09:33 IST)
Updated Date: Wed, 30 Aug 2017 (09:35 IST)