Publish Date: Tue, 29 Aug 2017 (08:42 IST)
Updated Date: Tue, 29 Aug 2017 (08:44 IST)
ನವದೆಹಲಿ: ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ಎಲ್ಲಾ ತಂಡಗಳ ವಿರುದ್ಧ ಜಯದ ಮೇಲೆ ಜಯ ಸಾಧಿಸಿ ತೋರುತ್ತಿರಬಹುದು. ಆದರೆ ನಮ್ಮ ನೆಲದಲ್ಲಿ ಈ ತಾಕತ್ತು ತೋರಿಸಲಿ ನೋಡೋಣ ಎಂದು ದ. ಆಫ್ರಿಕಾ ಮಾಜಿ ನಾಯಕ ಗ್ರೇಮ್ ಸ್ಮಿತ್ ಸವಾಲು ಹಾಕಿದ್ದಾರೆ.
ಟೀಂ ಇಂಡಿಯಾ ಈ ವರ್ಷದ ಅಂತ್ಯಕ್ಕೆ ಆಫ್ರಿಕಾ ಪ್ರವಾಸ ಮಾಡಲಿದೆ. ಈ ಸರಣಿಯಲ್ಲಿ ಟೀಂ ಇಂಡಿಯಾದ ಆಕ್ರಮಣಕಾರಿ ಆಟಗಾರರ ನೈಜ ಸಾಮರ್ಥ್ಯ ಒರೆಗೆ ಹಚ್ಚಿದಂತಾಗುತ್ತದೆ ಎಂದು ಸ್ಮಿತ್ ಅಭಿಪ್ರಾಯಪಟ್ಟಿದ್ದಾರೆ.
‘ದ. ಆಫ್ರಿಕಾದ ಹವಾಗುಣ ಭಾರತೀಯರಿಗೆ ಹೊಸದು. ಅದು ಲಂಕಾದಲ್ಲಿ ಅಥವಾ ಇನ್ನಾವುದೇ ಉಪಖಂಡದ ಪಿಚ್ ನಲ್ಲಿ ಆಡಿದಂತಲ್ಲ. ಇಲ್ಲಿ ಟೀಂ ಇಂಡಿಯಾಗೆ ನಿಜವಾದ ಅಗ್ನಿ ಪರೀಕ್ಷೆ ಕಾದಿದೆ’ ಎಂದು ಸ್ಮಿತ್ ಹೇಳಿಕೊಂಡಿದ್ದಾರೆ.
Krishnaveni
Publish Date: Tue, 29 Aug 2017 (08:42 IST)
Updated Date: Tue, 29 Aug 2017 (08:44 IST)