Publish Date: Fri, 25 Dec 2020 (09:44 IST)
Updated Date: Fri, 25 Dec 2020 (09:45 IST)
ಮೆಲ್ಬೋರ್ನ್: ಕಳಪೆ ಫಾರ್ಮ್ ನಿಂದಾಗಿ ತೀವ್ರ ಟೀಕೆಗೆ ಗುರಿಯಾಗಿರುವ ಪೃಥ್ವಿ ಶಾ ದ್ವಿತೀಯ ಟೆಸ್ಟ್ ನಲ್ಲಿ ಆಡುವ ಬಳಗದಲ್ಲಿ ಸ್ಥಾನ ಪಡೆಯುವುದು ಅನುಮಾನ. ಆದರೂ ಅವರು ತಮ್ಮ ವರ್ಕೌಟ್ ಮಾತ್ರ ಬಿಟ್ಟಿಲ್ಲ.
ಯುವ ಬ್ಯಾಟ್ಸ್ ಮನ್ ಜಿಮ್ ನಲ್ಲಿ ವರ್ಕೌಟ್ ಮಾಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮೊದಲ ಟೆಸ್ಟ್ ನಲ್ಲಿ ವಿಫಲರಾದ ಬಳಿಕ ಅವರು ತೀವ್ರ ಟೀಕೆಗೆ ಗುರಿಯಾಗಿದ್ದರು. ಈ ವೇಳೆ ಅವರ ಕೈಯಲ್ಲಿ ಸಾಧ‍್ಯವಾಗದ್ದು ನಿಮ್ಮ ಕೈಯಲ್ಲಿ ಸಾಧ‍್ಯ ಎಂದು ನಿಗೂಡಾರ್ಥದ ಟ್ವೀಟ್ ಮಾಡಿದ್ದರು.