ಮುಂಬೈ: ಟೀಂ ಇಂಡಿಯಾದ ಮ್ಯಾನೇಜ್ ಮೆಂಟ್ ನ್ನು ತಮ್ಮ ಇತ್ತೀಚೆಗೆ ಬರವಣಿಗೆಯಲ್ಲಿ ಖಡಕ್ ಆಗಿ ವಿಮರ್ಶಿಸಿರುವ ಹಿರಿಯ ಕ್ರಿಕೆಟಿಗ ಸುನಿಲ್ ಗವಾಸ್ಕರ್ ತಂಡದಲ್ಲಿ ನಡೆಯುತ್ತಿರುವ ತಾರತಮ್ಯದ ಬಗ್ಗೆ ವಿವರಿಸಿದ್ದಾರೆ.
ಟಿ ನಟರಾಜನ್ ಗೆ ಪಿತೃತ್ವ ರಜೆ ನೀಡದ ಬಗ್ಗೆ ಕಟು ಟೀಕೆ ಮಾಡಿರುವ ಗವಾಸ್ಕರ್, ರವಿಚಂದ್ರನ್ ಅಶ್ವಿನ್ ತಂಡದಲ್ಲಿ ಸ್ಥಾನ ಕಳೆದುಕೊಳ್ಳಬೇಕಾದ ಸ್ಥಿತಿ ನಿರ್ಮಾಣವಾಗಿದ್ದಕ್ಕೆ ಕಾರಣ ತಿಳಿಸಿದ್ದಾರೆ. ಅಶ್ವಿನ್ ನೇರವಾಗಿ ತಮಗೆ ಅನಿಸಿದ್ದನ್ನು ಮೀಟಿಂಗ್ ನಲ್ಲಿ ಹೇಳುತ್ತಿದ್ದರು. ಇದೇ ಕಾರಣಕ್ಕೆ ಅವರನ್ನು ಪ್ರತಿಭೆ, ಫಾರ್ಮ್ ಇದ್ದರೂ ತಂಡದಲ್ಲಿ ಮೂಲೆಗುಂಪು ಮಾಡಲಾಯಿತು. ಅವರು ಒಂದು ಪಂದ್ಯದಲ್ಲಿ ವಿಕೆಟ್ ಕೀಳಲಿಲ್ಲವೆಂದರೆ ದೂಸ್ರಾ ಅವಕಾಶವೇ ಕೊಡುತ್ತಿರಲಿಲ್ಲ ಎಂದು ಗವಾಸ್ಕರ್ ಗಂಭೀರ ಆರೋಪ ಮಾಡಿದ್ದಾರೆ.