Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ನಟರಾಜನ್ ಗೆ ಪಿತೃತ್ವ ರಜೆ ನೀಡದ ಬಿಸಿಸಿಐ ತಾರತಮ್ಯ!

ನಟರಾಜನ್ ಗೆ ಪಿತೃತ್ವ ರಜೆ ನೀಡದ ಬಿಸಿಸಿಐ ತಾರತಮ್ಯ!
ಮುಂಬೈ , ಗುರುವಾರ, 24 ಡಿಸೆಂಬರ್ 2020 (09:57 IST)
ಮುಂಬೈ: ಟೀಂ ಇಂಡಿಯಾದಲ್ಲಿ ನಾಯಕನಿಗೊಂದು ರೂಲ್ಸ್, ಇತರ ಆಟಗಾರರಿಗೊಂದು ರೂಲ್ಸ್. ತಾರತಮ್ಯ ಇಲ್ಲಿ ತಾಂಡವವಾಡುತ್ತಿದೆ ಎಂದು ಹಿರಿಯ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಹೇಳಿದ್ದಾರೆ.


ನಾಯಕ ವಿರಾಟ್ ಕೊಹ್ಲಿಗೆ ಪಿತೃತ್ವ ರಜೆ ನೀಡಿರುವ ಬಿಸಿಸಿಐ ಯುವ ವೇಗಿ ನಟರಾಜನ್ ಗೆ ಪಿತೃತ್ವ ರಜೆ ನಿರಾಕರಿಸಿದೆ. ಇಲ್ಲಿ ಬೇರೆ ಬೇರೆ ವ್ಯಕ್ತಿಗಳಿಗೆ ಬೇರೆ ಬೇರೆ ರೂಲ್ಸ್ ಎಂದು ಗವಾಸ್ಕರ್ ಮಾಧ್ಯಮವೊಂದರ ಅಂಕಣದಲ್ಲಿ ಟೀಕಿಸಿದ್ದಾರೆ. ಟಿ ನಟರಾಜನ್ ಈಗಷ್ಟೇ ತಂಡಕ್ಕೆ ಬಂದಿದ್ದಾರೆ. ಹಾಗಾಗಿ ಅವರಿಗೆ ಇದರ ಬಗ್ಗೆ ಅಪಸ್ವರ ಎತ್ತುವ ಹಾಗಿಲ್ಲ. ಐಪಿಎಲ್ ವೇಳೆ ನಟರಾಜನ್ ಹೆಣ್ಣು ಮಗುವಿನ ತಂದೆಯಾಗಿದ್ದರು. ಆದರೆ ದುಬೈನಿಂದಲೇ ಅವರನ್ನು ನೇರವಾಗಿ ಆಸ್ಟ್ರೇಲಿಯಾಗೆ ಕಳುಹಿಸಲಾಗಿತ್ತು. ಹೀಗಾಗಿ ಅವರಿಗೆ ತಮ್ಮ ನವಜಾತ ಮಗುವಿನ ಮುಖವನ್ನು ಜನವರಿಯಲ್ಲಷ್ಟೇ ನೋಡುವ ಭಾಗ್ಯ ಸಿಗಲಿದೆ. ಅಷ್ಟಕ್ಕೂ ಅವರು ಟೆಸ್ಟ್ ತಂಡದಲ್ಲಿ ಆಡುತ್ತಿಲ್ಲ. ಕೇವಲ ನೆಟ್ ಬೌಲರ್ ಆಗಿ ಬಳಸಲಾಗುತ್ತಿದೆ. ಬಿಸಿಸಿಐ ಮನಸ್ಸು ಮಾಡಿದ್ದರೆ ಅವರನ್ನು ತವರಿಗೆ ಕಳುಹಿಸಿ ಮಗುವಿನ ಮುಖ ನೋಡುವ ಅವಕಾಶ ಕೊಡಬಹುದಿತ್ತು. ಆದರೆ ಇಲ್ಲಿ ಒಬ್ಬೊಬ್ಬರಿಗೆ ಒಂದೊಂದು ನಿಯಮ ಎಂದು ಗವಾಸ್ಕರ್ ಕಿಡಿ ಕಾರಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಟಿ20 ಶ್ರೇಯಾಂಕದಲ್ಲಿ ಏರಿಕೆ ಕಂಡ ವಿರಾಟ್ ಕೊಹ್ಲಿ