ಮುಂಬೈ: ರಾಹುಲ್ ದ್ರಾವಿಡ್ ಕೋಚ್ ಆಗಿ ಶಿಖರ್ ಧವನ್ ನಾಯಕತ್ವದಲ್ಲಿ ಟೀಂ ಇಂಡಿಯಾ ಶ್ರೀಲಂಕಾದಲ್ಲಿ ಸೀಮಿತ ಓವರ್ ಗಳ ಸರಣಿ ಆಡಲು ತಯಾರಾಗುತ್ತಿದ್ದರೆ ಇತ್ತ ಟೀಂ ಇಂಡಿಯಾ ಮುಖ್ಯ ಕೋಚ್ ರವಿಶಾಸ್ತ್ರಿ ಮೇಲೆ ಒತ್ತಡ ಹೆಚ್ಚಾಗಿದೆ.
ರವಿಶಾಸ್ತ್ರಿ ಕೋಚಿಂಗ್ ಪಟ್ಟದ ಅವಧಿ ಇನ್ನೇನು ಮುಗಿಯುತ್ತಾ ಬಂದಿದೆ. ಇದುವರೆಗೆ ಅವರ ನೇತೃತ್ವದಲ್ಲಿ ಭಾರತ ಒಂದೇ ಒಂದು ಐಸಿಸಿ ಟೂರ್ನಿ ಗೆದ್ದಿಲ್ಲ. ಹೀಗಾಗಿ ಅವರ ಮೇಲೆ ಒತ್ತಡವಿದೆ. ಈಗ ದ್ರಾವಿಡ್ ಕೂಡಾ ಯಶಸ್ವಿಯಾದರೆ ಅವರನ್ನು ಕಿತ್ತೊಗೆಯುವುದು ಖಂಡಿತಾ.
ಹೀಗಾಗಿ ಈಗ ಹೆಚ್ಚಿನ ಒತ್ತಡ ರವಿಶಾಸ್ತ್ರಿ ಮೇಲಿದೆ ಎಂದು ಮಾಜಿ ಕ್ರಿಕೆಟಿಗ ರಿತೇಂದರ್ ಸಿಂಗ್ ಸೋಧಿ ಅಭಿಪ್ರಾಯಪಟ್ಟಿದ್ದಾರೆ. ಈಗಾಗಲೇ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಸೋತಾಗಿದೆ. ಇನ್ನೀಗ ಇಂಗ್ಲೆಂಡ್ ಸರಣಿಯಲ್ಲೂ ಉತ್ತಮ ಪ್ರದರ್ಶನ ತೋರದೇ ಹೋದರೆ ರವಿಶಾಸ್ತ್ರಿಯನ್ನು ಕೆಳಗಿಳಿಸಲು ಒತ್ತಾಯ ಹೆಚ್ಚಲಿದೆ. ಹೀಗಾಗಿ ಈ ಸರಣಿ ಅವರ ಪಾಲಿಗೆ ಮುಖ್ಯವಾಗಲಿದೆ.