Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಭಾರತ-ಶ್ರೀಲಂಕಾ ಏಕದಿನ: ಆಡುವ ಅಂತಿಮ ಬಳಗ ಹೀಗಿರಬಹುದು

ಭಾರತ-ಶ್ರೀಲಂಕಾ ಏಕದಿನ: ಆಡುವ ಅಂತಿಮ ಬಳಗ ಹೀಗಿರಬಹುದು
ಕೊಲೊಂಬೋ , ಭಾನುವಾರ, 18 ಜುಲೈ 2021 (09:20 IST)
ಕೊಲೊಂಬೋ: ಭಾರತ ಮತ್ತು ಶ್ರೀಲಂಕಾ ನಡುವಿನ ಮೊದಲ ಏಕದಿನ ಪಂದ್ಯ ಇಂದು ನಡೆಯಲಿದ್ದು, ಟೀಂ ಇಂಡಿಯಾ ಆಡುವ ಬಳಗದ ಬಗ್ಗೆ ಲೆಕ್ಕಾಚಾರ ಶುರುವಾಗಿದೆ.


ಆರಂಭಿಕ ಸ್ಥಾನಕ್ಕೆ ಶಿಖರ್ ಧವನ್ ಜೊತೆಗೆ ಇನಿಂಗ್ಸ್ ಆರಂಭಿಸಲು ದೇವದತ್ತ್ ಪಡಿಕ್ಕಲ್, ಪೃಥ್ವಿ ಶಾ, ಋತುರಾಜ್ ಗಾಯಕ್ ವಾಡ್ ನಡುವೆ ಭಾರೀ ಪೈಪೋಟಿಯಿದೆ. ಈ ಪೈಕಿ ಅನುಭವಿ ಪೃಥ್ವಿ ಶಾಗೆ ಸ್ಥಾನ ಸಿಗುವ ಸಾಧ‍್ಯತೆ ಹೆಚ್ಚಿದೆ. ಸೂರ್ಯ ಕುಮಾರ್ ಯಾದವ್ ಮೂರನೇ ಕ್ರಮಾಂಕದಲ್ಲಿ ಆಡುವುದು ಪಕ್ಕಾ. ವಿಕೆಟ್ ಕೀಪರ್ ಆಗಿ ಸಂಜು ಸ್ಯಾಮ್ಸನ್ ಕಣಕ್ಕಿಳಿಯಬಹುದು.

ಮಧ್ಯಮ ಕ್ರಮಾಂಕಕ್ಕೆ ಬಲ ತುಂಬಲು ಮನೀಶ್ ಪಾಂಡೆಗೆ ಅವಕಾಶ ಸಿಗಬಹುದು. ಆಲ್ ರೌಂಡರ್ ಸ್ಥಾನಕ್ಕೆ ಸಹೋದರರಾದ ಕೃನಾಲ್ ಮತ್ತು ಹಾರ್ದಿಕ್ ಪಾಂಡ್ಯ ನಡುವೆ ಪೈಪೋಟಿಯಿದೆ. ಈ ಪೈಕಿ ಹಾರ್ದಿಕ್ ಆಡುವುದು ಬಹುತೇಕ ಖಚಿತ. ಬೌಲಿಂಗ್ ವಿಭಾಗದಲ್ಲಿ ಉಪನಾಯಕ ಭುವನೇಶ್ವರ್ ಕುಮಾರ್ ಗೆ ದೀಪಕ್ ಚಹರ್ ಸಾಥ್ ನೀಡುವುದು ಪಕ್ಕಾ. ಒಂದು ವೇಳೆ ಇಬ್ಬರು ಸ್ಪಿನ್ನರ್ ಗಳು ಆಡುವುದಿದ್ದರೆ ಕುಲದೀಪ್ ಯಾದವ್, ಯಜುವೇಂದ್ರ ಚಾಹಲ್ ಜೋಡಿ ಕಣಕ್ಕಿಳಿಯಬಹುದು.

Share this Story:

Follow Webdunia kannada

ಮುಂದಿನ ಸುದ್ದಿ

ಭಾರತ-ಶ್ರೀಲಂಕಾ ಏಕದಿನ ಸರಣಿ ಇಂದಿನಿಂದ ಶುರು