Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಮುಂಬೈ: ಟೀಂ ಇಂಡಿಯಾ ಬ್ಯಾಟ್ಸ್ ಮನ್ ಕೆಎಲ್ ರಾಹುಲ್ ಮತ್ತು ಬಾಲಿವುಡ್ ನಟಿ ಅಥಿಯಾ ಶೆಟ್ಟಿ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಸುದ್ದಿ ಹಲವು ಸಮಯದಿಂದ ಹರಿದಾಡುತ್ತಲೇ ಇದೆ.
ಇದಕ್ಕೆ ತಕ್ಕ ಹಾಗೆ ಇಬ್ಬರೂ ಈಗ ಇಂಗ್ಲೆಂಡ್ ನಲ್ಲಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಕಾಣಿಸಿಕೊಂಡಿದೆ. ಇಬ್ಬರೂ ಅಧಿಕೃತವಾಗಿ ತಮ್ಮಿಬ್ಬರ ಸಂಬಂಧದ ಬಗ್ಗೆ ಹೇಳಿಕೊಳ್ಳದೇ ಹೋದರೂ ಇಬ್ಬರೂ ಪ್ರೇಮಿಗಳು ಎಂದು ಹಲವು ಬಾರಿ ಸಾಬೀತುಪಡಿಸಿದ್ದಾರೆ.
ಇದೀಗ ಇಬ್ಬರ ಸಂಬಂಧಕ್ಕೆ ಸ್ವತಃ ಅಥಿಯಾ ತಂದೆ, ನಟ ಸುನಿಲ್ ಶೆಟ್ಟಿ ಪರೋಕ್ಷವಾಗಿ ಒಪ್ಪಿಗೆ ಕೊಟ್ಟಿದ್ದಾರೆ. ಅಥಿಯಾ ಇಂಗ್ಲೆಂಡ್ ನಲ್ಲಿ ರಾಹುಲ್ ಗೆ ಜೊತೆಯಾಗಿದ್ದಾರಾ ಎಂಬ ಪ್ರಶ್ನೆಗೆ ಉತ್ತರಿಸಿರುವ ಸುನಿಲ್ ಹೌದು, ಆಕೆ ಇಂಗ್ಲೆಂಡ್ ನಲ್ಲಿರುವುದು ನಿಜ, ಆದರೆ ಸಹೋದರ ಅಹಾನ್ ಜೊತೆ ಹಾಲಿಡೇಗೆ ಹೋಗಿದ್ದಾಳೆ ಎಂದಿದ್ದಾರೆ. ಇನ್ನು, ರಾಹುಲ್ ಮತ್ತು ಅಥಿಯಾ ನಡುವಿನ ಸಂಬಂಧದ ಬಗ್ಗೆ ಅವರನ್ನೇ ಕೇಳುವುದು ಉತ್ತಮ. ಇಬ್ಬರದ್ದೂ ಒಳ್ಳೆ ಜೋಡಿ ಎಂದಿದ್ದಾರೆ.