Publish Date: Wed, 22 Jul 2020 (10:10 IST)
Updated Date: Wed, 22 Jul 2020 (10:12 IST)
ಮುಂಬೈ: ಐಸಿಸಿ ಟಿ20 ವಿಶ್ವಕಪ್ ಮುಂದೂಡಿಕೆ ಮಾಡಿದ ಘೋಷಣೆ ಮಾಡಿದ ಬೆನ್ನಲ್ಲೇ ಧೋನಿ ಟೀಂ ಇಂಡಿಯಾಗೆ ಕಮ್ ಬ್ಯಾಕ್ ಮಾಡುವ ಅವಕಾಶವೂ ಕ್ಷೀಣಿಸಿದಂತಾಗಿದೆ.
ಇದರ ಜತೆಗೆ ಬಿಸಿಸಿಐ ಟೀಂ ಇಂಡಿಯಾ ಗುತ್ತಿಗೆ ಪಡೆದ ಆಟಗಾರರಿಗೆ ಸೆಪ್ಟೆಂಬರ್ ನಲ್ಲಿ ವಿಶೇಷ ತರಬೇತಿ ಕ್ಯಾಂಪ್ ಆಯೋಜಿಸಲು ತೀರ್ಮಾನಿಸಿದ್ದು, ಆ ಕ್ಯಾಂಪ್ ಗೂ ಧೋನಿಗೆ ಎಂಟ್ರಿಯಿರಲ್ಲ.
ಕಾರಣ, ಧೋನಿ ಈಗಾಗಲೇ ಗುತ್ತಿಗೆ ಪಟ್ಟಿಯಲ್ಲಿಲ್ಲ. ಜತೆಗೆ ಅವರು ಕಮ್ ಬ್ಯಾಕ್ ಮಾಡುವ ಸಾಧ್ಯತೆಯಿದ್ದ ಟಿ20 ವಿಶ್ವಕಪ್ ಕೂಡಾ ಮುಂದೂಡಿಕೆಯಾಗಿದೆ. ಹೀಗಾಗಿ ಧೋನಿಗೆ ಹೆಚ್ಚು ಕಡಿಮೆ ಟೀಂ ಇಂಡಿಯಾ ಬಾಗಿಲು ಮುಚ್ಚಿದಂತೆಯೇ ಸರಿ.