Publish Date: Wed, 22 Jul 2020 (09:19 IST)
Updated Date: Wed, 22 Jul 2020 (09:20 IST)
ಮುಂಬೈ: ಸೆಪ್ಟೆಂಬರ್ 26 ರಿಂದ ಐಪಿಎಲ್ ಆರಂಭವಾಗಲಿದೆ. ಆದರೆ ಇದಕ್ಕೂ ಮೊದಲು ಭಾರತ ಅಂತಾರಾಷ್ಟ್ರೀಯ ಕ್ರಿಕೆಟ್ ಸರಣಿಯೊಂದನ್ನು ಆಡುವ ಸಾಧ‍್ಯತೆಯಿದೆ.
ಐಪಿಎಲ್ ಗೂ ಮೊದಲು ಭಾರತ ದ.ಆಫ್ರಿಕಾ ವಿರುದ್ಧ ಸೀಮಿತ ಓವರ್ ಗಳ ಕ್ರಿಕೆಟ್ ಸರಣಿ ಆಡಬೇಕು ಎಂದು ಬಿಸಿಸಿಐ ಉನ್ನತಾಧಿಕಾರಿಗಳೇ ಇಂಗಿತ ವ್ಯಕ್ತಪಡಿಸಿದ್ದಾರಂತೆ. ಆದರೆ ಅಂತಾರಾಷ್ಟ್ರೀಯ ಪಂದ್ಯಕ್ಕೆ ತಯಾರಾಗಲು ಟೀಂ ಇಂಡಿಯಾ ಆಟಗಾರರಿಗೆ ಪೂರ್ವಭಾವಿ ತರಬೇತಿ ಶಿಬಿರ ಆಯೋಜಿಸಲಾಗುತ್ತದೆ. ಇದನ್ನು ಆಗಸ್ಟ್ ನಲ್ಲಿ ಆಯೋಜಿಸಲು ಬಿಸಿಸಿಐ ಚಿಂತನೆ ನಡೆಸಿದೆ.
ಹೀಗಾಗಿ ಐಪಿಎಲ್ ಗೂ ಮೊದಲು ಭಾರತ-ದ.ಆಫ್ರಿಕಾ ಸರಣಿ ಎಲ್ಲಿ ನಡೆಯಬೇಕು, ಅದಕ್ಕೆ ಸಮಯ ಹೊಂದಿಸುವುದು ಹೇಗೆ ಎಂಬ ಪ್ರಶ್ನೆ ಈಗ ಮೂಡಿದೆ.