Publish Date: Tue, 21 Jul 2020 (11:06 IST)
Updated Date: Tue, 21 Jul 2020 (11:08 IST)
ಮುಂಬೈ: ಕೊರೋನಾ ಹಾವಳಿಯಿಂದ ಕ್ರಿಕೆಟ್ ಪಂದ್ಯಗಳೂ ನಡೆಯುತ್ತಿಲ್ಲ ಎಂಬ ಬೇಸರದಲ್ಲಿದ್ದ ಅಭಿಮಾನಿಗಳಿಗೆ ಬಿಸಿಸಿಐ ಸಿಹಿ ಸುದ್ದಿ ನೀಡಿದೆ.
ಆಗಸ್ಟ್ ಅಂತ್ಯ ಅಥವಾ ಸೆಪ್ಟೆಂಬರ್ ಆದಿಯಲ್ಲಿ ಅಹಮ್ಮದಾಬಾದ್ ನಲ್ಲಿ ಟೀಂ ಇಂಡಿಯಾ ಕ್ರಿಕೆಟಿಗರಿಗೆ ತರಬೇತಿ ಶಿಬಿರ ಆಯೋಜಿಸಲು ಬಿಸಿಸಿಐ ತೀರ್ಮಾನಿಸಿದೆ.
ಇದರಿಂದಾಗಿ ಐಪಿಎಲ್ ಮತ್ತು ಇತರ ಅಂತಾರಾಷ್ಟ್ರೀಯ ಪಂದ್ಯಗಳಿಗೆ ಮೊದಲು ಭಾರತ ತಂಡ ಸಜ್ಜಾಗಲು ಸಹಾಯವಾಗಲಿದೆ. ಈಗಾಗಲೇ ಕೆಲವು ಕ್ರಿಕೆಟಿಗರು ತಮ್ಮ ತವರಿನಲ್ಲಿ ಅಭ್ಯಾಸ ಶುರು ಮಾಡಿಕೊಂಡಿದ್ದಾರೆ. ಆದರೆ ಆಟಗಾರರನ್ನು ಅಂತಾರಾಷ್ಟ್ರೀಯ ಪಂದ್ಯಕ್ಕೆ ತಯಾರುಗೊಳಿಸಲು ಇಂತಹದ್ದೊಂದು ತರಬೇತಿ ಶಿಬಿರ ಅಗತ್ಯ ಎಂದು ಟೀಂ ಇಂಡಿಯಾ ಕೋಚ್ ಗಳ ಅಭಿಪ್ರಾಯವಾಗಿದೆ.