Publish Date: Wed, 06 Mar 2019 (09:10 IST)
Updated Date: Wed, 06 Mar 2019 (09:11 IST)
ಮುಂಬೈ: ಟೀಂ ಇಂಡಿಯಾ ವೇಗಿ ಜಸ್ಪ್ರೀತ್ ಬುಮ್ರಾ ವಿಶಿಷ್ಟ ಬೌಲಿಂಗ್ ಶೈಲಿಯ ಮೂಲಕವೇ ಹೆಸರು ಮಾಡಿದವರು. ಇದೀಗ ಅವರಿಗೆ ಮತ್ತೊಬ್ಬ ಪ್ರತಿಸ್ಪರ್ಧಿ ಹುಟ್ಟಿಕೊಂಡಿದ್ದಾರೆ.
ಬುಮ್ರಾ ಬೌಲಿಂಗ್ ಶೈಲಿಯಲ್ಲೇ ಹಾಂಗ್ ಕಾಂಗ್ ಅಂಡರ್ 13 ತಂಡದಲ್ಲಿ ಬೌಲರ್ ಒಬ್ಬರು ಬೌಲಿಂಗ್ ಮಾಡುತ್ತಿದ್ದು, ಇದನ್ನು ಸ್ವತಃ ಹಾಂಗ್ ಕಾಂಗ್ ಕ್ರಿಕೆಟ್ ತನ್ನ ಟ್ವಿಟರ್ ಪೇಜ್ ನಲ್ಲಿ ಪ್ರಕಟಿಸಿದೆ.
ಬುಮ್ರಾಗೆ ಟ್ಯಾಗ್ ಮಾಡಿ ಟ್ವೀಟ್ ಮಾಡಿರುವ ಹಾಂಗ್ ಕಾಂಗ್ ಕ್ರಿಕೆಟ್ ಸಂಸ್ಥೆ ಆ ಯುವ ಬೌಲರ್ ನ ವಿಡಿಯೋ ಪ್ರಕಟಿಸಿ, ಈತನ ಬೌಲಿಂಗ್ ನೋಡಿದರೆ ಯಾರೋ ನೆನಪಾಗುತ್ತಾರಲ್ವಾ? ಎಂದು ಪ್ರಶ್ನಿಸಿದೆ. ಈ ಯುವ ಬೌಲರ್ ನ ಬೌಲಿಂಗ್ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.