Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಭಾರತ-ಆಸ್ಟ್ರೇಲಿಯಾ ಏಕದಿನ: ಕೊನೆಯ ಓವರ್ ಮತ್ತು ವಿಜಯ್ ಶಂಕರ್ ಮ್ಯಾಜಿಕ್!

ಭಾರತ-ಆಸ್ಟ್ರೇಲಿಯಾ ಏಕದಿನ: ಕೊನೆಯ ಓವರ್ ಮತ್ತು ವಿಜಯ್ ಶಂಕರ್ ಮ್ಯಾಜಿಕ್!
ನಾಗ್ಪುರ , ಬುಧವಾರ, 6 ಮಾರ್ಚ್ 2019 (08:44 IST)
ನಾಗ್ಪುರ: ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಡೆದ ದ್ವಿತೀಯ ಏಕದಿನ ಪಂದ್ಯವನ್ನು ಟೀಂ ಇಂಡಿಯಾ 8 ರನ್ ಗಳಿಂದ ರೋಚಕವಾಗಿ ಗೆದ್ದುಕೊಂಡಿದೆ.


ಇದಕ್ಕೆ ಕಾರಣವಾಗಿದ್ದು, ಟೀಂ ಇಂಡಿಯಾ ಬೌಲರ್ ಗಳು. ಗೆಲುವಿಗೆ ಕೇವಲ 250 ರನ್ ಗಳ  ಗುರಿ ಬೆನ್ನತ್ತಿದ್ದ ಆಸೀಸ್ ಈ ಪಂದ್ಯವನ್ನು ಸುಲಭವಾಗಿ ಗೆದ್ದುಬಿಡುವಂತಹ ಪರಿಸ್ಥಿತಿಯಿತ್ತು. ಮಧ್ಯಮ ಕ್ರಮಾಂಕದಲ್ಲಿ ಮಾರ್ಕಸ್ ಸ್ಟಾಯಿನಿಸ್ 52 ರನ್ ಗಳಿಸಿ ತಂಡವನ್ನು ಗೆಲುವಿನ ಗುರಿ ಮುಟ್ಟಿಸುವುದರಲ್ಲಿದ್ದರು.

ಆದರೆ ಈ ಹಂತದಲ್ಲಿ ನಾಯಕ ಕೊಹ್ಲಿ, ಧೋನಿ ಮತ್ತು ರೋಹಿತ್ ಶರ್ಮಾ ಜತೆಗೆ ಸುದೀರ್ಘ ಚರ್ಚೆ ನಡೆಸಿ ಅಂತಿಮ ಓವರ್ ನ್ನು ಯುವ ಆಲ್ ರೌಂಡರ್ ವಿಜಯ್ ಶಂಕರ್ ಕೈಗೆ ಬಾಲ್ ಒಪ್ಪಿಸಿದರು. ವಿಜಯ್ ಶಂಕರ್ ಗೆ ಇದು ಕೇವಲ 2 ನೇ ಓವರ್ ಆಗಿತ್ತು. ಆಗ ಆಸ್ಟ್ರೇಲಿಯಾಗೆ 11 ರನ್ ಬೇಕಾಗಿತ್ತು. ಎರಡು ವಿಕೆಟ್ ಕೈಯಲ್ಲಿತ್ತು.

ಆದರೆ ಈ ಓವರ್ ನಲ್ಲಿ ನಿಯಂತ್ರಿತ ದಾಳಿ ನಡೆಸಿದ ವಿಜಯ್ ಶಂಕರ್ ಮೊದಲ ಬಾಲ್ ನಲ್ಲಿಯೇ ಸೆಟ್ ಆಗಿದ್ದ ಸ್ಟಾಯಿನಿಸ್ ವಿಕೆಟ್ ಪಡೆದರು. ನಂತರದ ಬಾಲ್ ನಲ್ಲಿ ಆಸೀಸ್ ಎರಡು ರನ್ ಗಳಿಸಿತು. ಆದರೆ ಇನ್ನೂ ಗೆಲುವಿಗೆ 9 ರನ್ ಬೇಕಾಗಿತ್ತು. ಆದರೆ ನಂತರದ ಎಸೆತದಲ್ಲಿಯೇ ವಿಜಯ್ ಶಂಕರ್ ಆಡಂ ಜಂಪಾರನ್ನು ಬೌಲ್ಡ್ ಮಾಡುವುದರ ಮೂಲಕ ಭಾರತದ ಗೆಲುವನ್ನು ಖಾತ್ರಿ ಮಾಡಿದರು. ಆಸ್ಟ್ರೇಲಿಯಾ 49.2 ಓವರ್ ಗಳಲ್ಲಿ 242 ಕ್ಕೆ ಆಲೌಟ್ ಆಯಿತು. ಇದರೊಂದಿಗೆ ಭಾರತಕ್ಕೆ ಸರಣಿಯಲ್ಲಿ 2-0 ಮುನ್ನಡೆ ಲಭಿಸಿತು.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ವಿರಾಟ್ ಕೊಹ್ಲಿ ಶತಕದ ಹೊರತಾಗಿಯೂ ನಿರೀಕ್ಷಿತ ಮೊತ್ತ ಗಳಿಸದ ಟೀಂ ಇಂಡಿಯಾ