ನಾಗ್ಪುರ: ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಡೆಯುತ್ತಿರುವ ದ್ವಿತೀಯ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಯಾವುದೇ ಬದಲಾವಣೆಯಿಲ್ಲದೇ ಕಣಕ್ಕಿಳಿದಿದೆ.
ಟಾಸ್ ಗೆದ್ದಿರುವ ಆಸ್ಟ್ರೇಲಿಯಾ ಮೊದಲು ಫೀಲ್ಡಿಂಗ್ ಆಯ್ದುಕೊಂಡಿದೆ. ಮೊದಲ ಏಕದಿನ ಪಂದ್ಯ ಸೋತಿದ್ದ ಆಸೀಸ್ ಈ ಪಂದ್ಯದಲ್ಲಿ ನಥನ್ ಲಿಯೋನ್ ಮತ್ತು ಶಾನ್ ಮಾರ್ಷ್ ಗೆ ಸ್ಥಾನ ನೀಡಿದೆ.
ಕಳೆದ ಬಾರಿ ಧೋನಿ ಮತ್ತು ಜಾಧವ್ ರಿಂದಾಗಿ ಚೇಸ್ ಮಾಡಿ ಟೀಂ ಇಂಡಿಯಾ ಗೆದ್ದಿತ್ತು. ಹೀಗಾಗಿ ಈ ಬಾರಿ ಮತ್ತೆ ರಿಸ್ಕ್ ತೆಗೆದುಕೊಳ್ಳಲು ನಾವು ತಯಾರಿಲ್ಲ. ಇದಕ್ಕಾಗಿಯೇ ಮೊದಲು ಫೀಲ್ಡಿಂಗ್ ಆಯ್ದುಕೊಳ್ಳುತ್ತಿದ್ದೇವೆ ಎಂದು ಆಸೀಸ್ ನಾಯಕ ಏರನ್ ಫಿಂಚ್ ಟಾಸ್ ಬಳಿಕ ಹೇಳಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.