Publish Date: Mon, 11 May 2020 (08:58 IST)
Updated Date: Mon, 11 May 2020 (08:59 IST)
ಮುಂಬೈ: ತಮ್ಮನ್ನು ಬಹುಬೇಗನೇ ವಯಸ್ಸಾದವರ ಪಟ್ಟಿಗೆ ಸೇರಿಸಿದ ಭಾರತ ಕ್ರಿಕೆಟ್ ತಂಡದ ಆಯ್ಕೆ ಸಮಿತಿ ವಿರುದ್ಧ ಟೀಂ ಇಂಡಿಯಾ ಹಿರಿಯ ಆಟಗಾರರಾದ ಸುರೇಶ್ ರೈನಾ ಮತ್ತು ಇರ್ಫಾನ್ ಪಠಾಣ್ ಕಿಡಿ ಕಾರಿದ್ದಾರೆ.
ನನ್ನನ್ನು 30 ವರ್ಷಕ್ಕೇ ಹಿರಿಯ ಎಂದು ಕಡೆಗಣಿಸಿದರು. ಒಂದು ವೇಳೆ ಆಯ್ಕೆ ಸಮಿತಿ ಸರಿಯಾಗಿ ಸಂವಹನ ನಡೆಸಿದರೆ ಈಗಲೂ ನಿವೃತ್ತಿ ತ್ಯಜಿಸಿ ಕ್ರಿಕೆಟ್ ಗೆ ಮರಳಲು ಸಿದ್ಧ ಎಂದು ಪಠಾಣ್ ಹೇಳಿದ್ದಾರೆ.
ಇದೇ ವೇಳೆ ಸುರೇಶ್ ರೈನಾ ಕೂಡಾ ಆಯ್ಕೆ ಸಮಿತಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದು, ಮಾಜಿ ಆಯ್ಕೆ ಸಮಿತಿ ಮುಖ್ಯಸ್ಥ ಎಂಎಸ್ ಕೆ ಪ್ರಸಾದ್ ತನ್ನ ಜತೆ ಸರಿಯಾಗಿ ಸಂವಹನವನ್ನೇ ನಡೆಸದೇ ಮೂಲೆಗುಂಪು ಮಾಡಿದರು ಎಂದಿದ್ದಾರೆ. ನಾವು ಪ್ರಥಮ ದರ್ಜೆ, ಅಂತಾರಾಷ್ಟ್ರೀಯ, ಐಪಿಎಲ್ ಕ್ರಿಕೆಟ್ ನಲ್ಲಿ ಮಾಡಿದ ಸಾಧನೆಗಳನ್ನು ಜನರು ಪರಿಗಣಿಸುವುದೇ ಇಲ್ಲ. ಇದು ತುಂಬಾ ನೋವು ಕೊಡುತ್ತದೆ ಎಂದು ಪಠಾಣ್ ಜತೆಗಿನ ಇನ್ ಸ್ಟಾಗ್ರಾಂ ಲೈವ್ ಚ್ಯಾಟ್ ನಲ್ಲಿ ರೈನಾ ಹೇಳಿದ್ದಾರೆ.