Publish Date: Sun, 10 May 2020 (09:17 IST)
Updated Date: Sun, 10 May 2020 (09:19 IST)
ಮುಂಬೈ: ಟೀಂ ಇಂಡಿಯಾದ ಯಶಸ್ವೀ ಆರಂಭಿಕ ಜೋಡಿ ಶಿಖರ್ ಧವನ್ ಮತ್ತು ರೋಹಿತ್ ಶರ್ಮಾ ಮೈದಾನದ ಹೊರಗೂ ಅಷ್ಟೇ ಉತ್ತಮ ಸ್ನೇಹ ಸಂಬಂಧ ಕಾಯ್ದುಕೊಂಡಿದ್ದಾರೆ.
ಈ ಇಬ್ಬರೂ ಓಪನಿಂಗ್ ಮಾಡಿದರೆ ಯಾವಾಗಲೂ ರೋಹಿತ್ ರೇ ಮೊದಲ ಬಾಲ್ ಎದುರಿಸುತ್ತಾರೆ. ಈ ಬಗ್ಗೆ ಇನ್ ಸ್ಟಾಗ್ರಾಂ ಲೈವ್ ಚ್ಯಾಟ್ ವೇಳೆ ಡೇವಿಡ್ ವಾರ್ನರ್ ಪ್ರಶ್ನಿಸಿದ್ದಕ್ಕೆ ರೋಹಿತ್ ಹೇಳಿದ್ದೇನು ಗೊತ್ತಾ?
‘ಶಿಖರ್ ಒಬ್ಬ ಈಡಿಯಟ್. ಅವರು ಯಾವತ್ತೂ ಮೊದಲ ಬಾಲ್ ಎದುರಿಸಲು ಇಷ್ಟಪಡಲ್ಲ. ಅವರು ಸ್ಪಿನ್ನರ್ ಗಳನ್ನು ಎದುರಿಸಲು ಇಷ್ಟಪಡುತ್ತಾರೆ. ವೇಗಿಗಳನ್ನು ಎದುರಿಸಲು ಇಷ್ಟಪಡಲ್ಲ. ಹಿಂದೊಮ್ಮೆ ದ.ಆಫ್ರಿಕಾ ವಿರುದ್ಧ ಚಾಂಪಿಯನ್ ಟ್ರೋಫಿ ಆಡುವಾಗಲೂ ಹೀಗೇ ಆಗಿತ್ತು. ಡೇಲ್ ಸ್ಟೈನ್, ಮಾರ್ನೆ ಮಾರ್ಕೆಲ್ ರಂತಹ ವೇಗಿಗಳನ್ನು ಕಂಡಾಗ ನೀನೇ ಓಪನಿಂಗ್ ಮಾಡು ಎಂದು ನಾನು ಶಿಖರ್ ಗೆ ಹೇಳಿದರೆ ನನ್ನ ಬಳಿ ಬೇಡ ನಾನು ಮಾಡಲ್ಲ, ನೀನೇ ಮಾಡು ಎಂದು ಒತ್ತಾಯ ಮಾಡಿದ್ದ’ ಎಂದು ರೋಹಿತ್ ತಮಾಷೆಯಾಗಿಯೇ ಹೇಳಿದ್ದಾರೆ.