Publish Date: Sat, 09 May 2020 (09:55 IST)
Updated Date: Sat, 09 May 2020 (09:57 IST)
ಮುಂಬೈ: ಟೀಂ ಇಂಡಿಯಾ ಆರಂಭಿಕ ರೋಹಿತ್ ಶರ್ಮಾ ಹಾಗೂ ಆಸ್ಟ್ರೇಲಿಯಾ ಆರಂಭಿಕ ಡೇವಿಡ್ ವಾರ್ನರ್ ಇನ್ ಸ್ಟಾಗ್ರಾಂ ಲೈವ್ ಚ್ಯಾಟ್ ನಡೆಸಿದ್ದು, ಹಲವು ವಿಚಾರಗಳನ್ನು ವಿನಿಮಯ ಮಾಡಿಕೊಂಡಿದ್ದಾರೆ.
ಇಬ್ಬರೂ ಹೊಡೆಬಡಿಯ ಆಟದ ಮೂಲಕವೇ ಜಗತ್ತಿನ ಗಮನ ಸೆಳೆಯುತ್ತಿದ್ದಾರೆ. ಹೀಗಾಗಿ ಇಬ್ಬರ ಲೈವ್ ಚ್ಯಾಟ್ ಕುತೂಹಲಕಾರಿಯಾಗಿತ್ತು.
ಈ ವೇಳೆ ವಾರ್ನರ್ ನಮ್ಮಿಂದಾಗಿ ಟೀಂ ಇಂಡಿಯಾ ನಾಯಕ ಕೊಹ್ಲಿ ಮತ್ತು ಆಸ್ಟ್ರೇಲಿಯಾ ನಾಯಕ ಸ್ಟೀವ್ ಸ್ಮಿತ್ ಕೆಲಸ ಸುಲಭವಾಗುತ್ತಿದೆ ಎಂದು ಜೋಕ್ ಮಾಡಿದ್ದಾರೆ. ‘ಎಲ್ಲರೂ ಕೊಹ್ಲಿ, ಸ್ಮಿತ್ ವಿಶ್ವದ ದಿಗ್ಗಜ ಆಟಗಾರರು ಎನ್ನುತ್ತಾರೆ. ಆದರೆ ಅದಕ್ಕೆ ಕಾರಣ ನಾವು ಬಾಲ್ ನ ಹೊಳಪು ಮೊದಲೇ ತೆಗೆದಿರುತ್ತೇವೆ. ಹೀಗಾಗಿ ಅವರಿಗೆ ಚೆನ್ನಾಗಿ ಆಡಲು ಸಾಧ‍್ಯವಾಗುತ್ತದೆ. ಆರಂಭಿಕರಾಗಿ ನಾವು ಒಳ್ಳೆಯ ಕೆಲಸ ಮಾಡುತ್ತಿದ್ದೇವೆ’ ಎಂದು ವಾರ್ನರ್ ರೋಹಿತ್ ಜತೆ ತಮಾಷೆ ಮಾಡಿದ್ದಾರೆ.