ಸೆಂಚೂರಿಯನ್: ಟೀಂ ಇಂಡಿಯಾವನ್ನು ಕೆಡವಲು ದ.ಆಫ್ರಿಕಾ ಮತ್ತೊಂದು ಬೌನ್ಸಿ ಖೆಡ್ಡಾ ರೆಡಿ ಮಾಡಿದೆ ಎಂದು ಎಲ್ಲರೂ ಅಂದುಕೊಳ್ಳುತ್ತಿರುವಾಗಲೇ ದ್ವಿತೀಯ ಟೆಸ್ಟ್ ಪಂದ್ಯ ನಡೆಯುತ್ತಿರುವ ಸೆಂಚೂರಿಯನ್ ಮೈದಾನದ ಪಿಚ್ ಅಚ್ಚರಿಗೆ ನೂಕಿದೆ.
ಮೊದಲ ದಿನವೇ ಭಾರತದ ಸ್ಪಿನ್ನರ್ 3 ವಿಕೆಟ್ ಕಿತ್ತರೆ, ವೇಗಿಗಳು ವಿಕೆಟ್ ಪಡೆಯಲು ಪರದಾಡಿದರು. ಎಲ್ಲರೂ ನಿರೀಕ್ಷಿಸಿದ ಬೌನ್ಸ್ ಕಾಣಿಸಲೇ ಇಲ್ಲ. ಹಸಿರು ಪಿಚ್ ನಿರೀಕ್ಷಿಸಿದ್ದವರಿಗೆ ಇಲ್ಲಿನ ಡ್ರೈ ಪಿಚ್ ನೋಡಿ ಅಚ್ಚರಿಯಾಗಿದೆ. ಇದರಿಂದಾಗಿ ಬ್ಯಾಟ್ಸ್ ಮನ್ ಗಳೂ ರನ್ ಗಳಿಸಲು ಪರದಾಡಲಿಲ್ಲ. ಆದರೆ ಟೀಂ ಇಂಡಿಯಾ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಪರಿಸ್ಥಿತಿಯ ಸಂಪೂರ್ಣ ಲಾಭವೆತ್ತಿದ್ದಾರೆ.
ಅಶ್ವಿನ್ ಗೆ ಸಿಕ್ಕ ಯಶಸ್ಸು ನೋಡಿ ವೇಗಿಗಳ ಪಡೆಯೇ ಕಟ್ಟಿಕೊಂಡು ಮೈದಾನಕ್ಕಿಳಿದಿರುವ ಉಭಯ ತಂಡದ ನಾಯಕರು ಬೆಪ್ಪಾಗಿದ್ದಾರೆ. ಮೊದಲ ದಿನದಂತ್ಯಕ್ಕೆ ದ.ಆಫ್ರಿಕಾ 6 ವಿಕೆಟ್ ನಷ್ಟಕ್ಕೆ 269 ರನ್ ಗಳಿಸಿದೆ. ಹಾರ್ದಿಕ್ ಪಾಂಡ್ಯ ಬೌಲಿಂಗ್ ನಲ್ಲಿ ಕಮಾಲ್ ಮಾಡದಿದ್ದೂ 82 ರನ್ ಗಳಿಸಿದ್ದ ಅಪಾಯಕಾರಿ ಹಶೀಮ್ ಆಮ್ಲಾರನ್ನು ಅದ್ಭುತವಾಗಿ ರನೌಟ್ ಮಾಡುವುದರ ಮೂಲಕ ದಿನದಾಟದ ಗೌರವವನ್ನು ಭಾರತಕ್ಕೆ ನೀಡುವಲ್ಲಿ ಯಶಸ್ವಿಯಾದರು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ