ಜೊಹಾನ್ಸ್ ಬರ್ಗ್: ಇಂದು ಆರಂಭವಾಗಲಿರುವ ದ.ಆಫ್ರಿಕಾ ವಿರುದ್ಧದ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಆರಂಭಿಕರಾಗಿ ಕೆಎಲ್ ರಾಹುಲ್ ರನ್ನು ಆಡಿಸಲು ಮತ್ತಷ್ಟು ಒತ್ತಾಯ ಕೇಳಿಬಂದಿದ್ದು ಇದೀಗ ಮಾಜಿ ಕ್ರಿಕೆಟಿಗ ಚಂದು ಬೋರ್ಡೆ ಇದಕ್ಕೆ ಧ್ವನಿಗೂಡಿಸಿದ್ದಾರೆ.
ಮೊದಲ ಟೆಸ್ಟ್ ನಲ್ಲಿ ರಾಹುಲ್ ರನ್ನು ತಂಡ ಕಣಕ್ಕಿಳಿಸಿರಲಿಲ್ಲ. ಈ ಪಂದ್ಯವನ್ನು ಭಾರತ ಹೀನಾಯವಾಗಿ ಸೋತಿತ್ತು. ಇದೀಗ ಗೆಲ್ಲುವ ಅನಿವಾರ್ಯತೆಯಲ್ಲಿರುವ ತಂಡಕ್ಕೆ ಸಾಕಷ್ಟು ಟಿಪ್ಸ್ ಕೇಳಿಬರುತ್ತಿದೆ.
ಅದರಲ್ಲೂ ಕೆಎಲ್ ರಾಹುಲ್ ರನ್ನು ಆಡಿಸುವಂತೆ ಸಚಿನ್, ಗಂಗೂಲಿ ಸೇರಿದಂತೆ ಘಟಾನುಘಟಿಗಳು ಸಲಹೆ ನೀಡಿದ್ದಾರೆ. ಇದೀಗ ಆ ಸಾಲಿಗೆ ಚಂದು ಬೋರ್ಡೆ ಸೇರಿಕೊಂಡಿದ್ದಾರೆ. ‘ಮೊದಲ ಟೆಸ್ಟ್ ನಲ್ಲಿ ನಮ್ಮ ಬ್ಯಾಟ್ಸ್ ಮನ್ ಗಳು ಆಫ್ ಸ್ಟಂಪ್ ನಾಚೆ ಹೋಗುವ ಬಾಲ್ ಗಳನ್ನು ಕೆಣಕಿ ಔಟಾಗಿದ್ದರು. ಹೀಗಾಗಿ ನಾನು ಧವನ್ ಬದಲಿಗೆ ರಾಹುಲ್ ರನ್ನು ಆರಂಭಿಕರಾಗಿ ನೋಡಲು ಬಯಸುತ್ತೇನೆ. ರಾಹುಲ್ ಆಫ್ ಸ್ಟಂಪ್ ನಾಚೆ ಹೋಗುವ ಬಾಲ್ ಗಳನ್ನು ಚೆನ್ನಾಗಿ ನಿಭಾಯಿಸುತ್ತಾರೆ’ ಎಂದು ಬೋರ್ಡೆ ಅಭಿಪ್ರಾಯಪಟ್ಟಿದ್ದಾರೆ.
ಕೆಲವು ಮೂಲಗಳ ಪ್ರಕಾರ ಇಂದಿನ ಪಂದ್ಯದಲ್ಲಿ ಶಿಖರ್ ಧವನ್ ಬದಲಿಗೆ ಕೆಎಲ್ ರಾಹುಲ್ ಆಡಲಿದ್ದಾರೆ ಎಂಬ ಸುದ್ದಿ ಹಬ್ಬಿದೆ. ಇದು ಎಷ್ಟರಮಟ್ಟಿಗೆ ನಿಜವಾಗುತ್ತದೆ ಎಂದು ಕೆಲವೇ ಕ್ಷಣಗಳಲ್ಲಿ ತಿಳಿಯಲಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ