ಜೊಹಾನ್ಸ್ ಬರ್ಗ್: ದ.ಆಫ್ರಿಕಾ ಮತ್ತು ಭಾರತ ನಡುವಿನ ದ್ವಿತೀಯ ಟೆಸ್ಟ್ ಪಂದ್ಯ ಆರಂಭವಾಗಿದ್ದು, ಟಾಸ್ ಗೆದ್ದ ಅತಿಥೇಯರು ಮೊದಲು ಬ್ಯಾಟಿಂಗ್ ಆರಂಭಿಸಿದ್ದಾರೆ. ಆದರೆ ಭಾರತ ತಂಡದಲ್ಲಿ ಅಚ್ಚರಿಯೆಂಬಂತೆ ಕಳೆದ ಪಂದ್ಯದ ಹೀರೋ ಭುವನೇಶ್ವರ್ ಕುಮಾರ್ ರನ್ನು ಹೊರಗಿಡಲಾಗಿದೆ.
ಭುವನೇಶ್ವರ್ ಕುಮಾರ್ ರನ್ನು ಹೊರಗಿಟ್ಟು ಹಿರಿಯ ವೇಗಿ ಇಶಾಂತ್ ಶರ್ಮಾಗೆ ಮಣೆ ಹಾಕಲಾಗಿದೆ. ಇದಕ್ಕೆ ಕಾರಣ ಈ ಪಿಚ್ ನಲ್ಲಿರುವ ಬೌನ್ಸ್. ಇಶಾಂತ್ ನೀಳಕಾಯದವರಾಗಿರುವುದರಿಂದ ಅವರ ಬಾಲ್ ನಲ್ಲಿ ಬೌನ್ಸ್ ಸಿಗಬಹುದು ಎಂಬ ನಿರೀಕ್ಷೆಯಲ್ಲಿ ಕೊಹ್ಲಿ ಭುವನೇಶ್ವರ್ ರನ್ನು ಹೊರಗಿಡುವ ಕಠಿಣ ನಿರ್ಧಾರ ತೆಗೆದುಕೊಂಡಿದ್ದಾರೆ.
ಇನ್ನೊಂದೆಡೆ ಕೆಎಲ್ ರಾಹುಲ್ ತಂಡಕ್ಕೆ ಬಂದಿರುವುದು ಕನ್ನಡಿಗರಿಗೆ ಸಂತಸ ಮೂಡಿಸಿದೆ. ಶಿಖರ್ ಧವನ್ ಸ್ಥಾನಕ್ಕೆ ರಾಹುಲ್ ಆಗಮನವಾಗಿದೆ. ವೃದ್ಧಿಮಾನ್ ಸಹಾ ಜಾಗದಲ್ಲಿ ವಿಕೆಟ್ ಕೀಪರ್ ಆಗಿ ಹಿರಿಯ ವಿಕೆಟ್ ಕೀಪರ್ ಪಾರ್ಥಿವ್ ಪಟೇಲ್ ಗೆ ಅವಕಾಶ ನೀಡಲಾಗಿದೆ. ಈ ಬದಲಾವಣೆ ಎಷ್ಟು ಕ್ಲಿಕ್ ಆಗುತ್ತದೆ ಎಂದು ಸಮಯ ಕಳೆದಂತೆ ತಿಳಿದು ಬರಲಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ