Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಲವ್ ಅಫೇರ್ ಬಗ್ಗೆ ಬಾಯ್ಬಿಟ್ಟ ಹಾರ್ದಿಕ್ ಪಾಂಡ್ಯ

ಲವ್ ಅಫೇರ್ ಬಗ್ಗೆ ಬಾಯ್ಬಿಟ್ಟ ಹಾರ್ದಿಕ್ ಪಾಂಡ್ಯ
ಮುಂಬೈ , ಶನಿವಾರ, 9 ಸೆಪ್ಟಂಬರ್ 2017 (11:29 IST)
ಮುಂಬೈ: ಬಾಲಿವುಡ್ ಬೆಡಗಿ ಪರಿಣಿತಿ ಚೋಪ್ರಾ ಮತ್ತು ಹಾರ್ದಿಕ್ ಪಾಂಡ್ಯ ನಡುವಿನ ರೊಮ್ಯಾಂಟಿಕ್ ಟ್ವಿಟರ್ ಸಂಭಾಷಣೆ ನೋಡಿ ಇವರ ನಡುವೆ ಲವ್ವು ಶುರುವಾಗಿದೆ ಎಂದೇ ಎಲ್ಲರೂ ಗುಸು ಗುಸು ಪ್ರಾರಂಭಿಸಿದ್ದರು.

 
ಆದರೆ ಈ ಗಾಸಿಪ್ ಬಗ್ಗೆ ಇದೀಗ ಸ್ವತಃ ಹಾರ್ದಿಕ್ ಪಾಂಡ್ಯ ಪ್ರತಿಕ್ರಿಯಿಸಿದ್ದಾರೆ. ಇದೆಲ್ಲಾ  ಅರ್ಥವಿಲ್ಲದ್ದು. ನಮ್ಮಿಬ್ಬರ ನಡುವೆ ಅಂತಹದ್ದು ಏನೂ ಇಲ್ಲ ಎಂದು ಹಾರ್ದಿಕ್ ಹೇಳಿದ್ದಾರೆ.

‘ಇಂತಹ ರೂಮರ್ ಗಳಿಗೆಲ್ಲಾ ನನ್ನ ಬಳಿ ಉತ್ತರವಿಲ್ಲ. ನನಗೆ ಆಕೆಯನ್ನು ಸರಿಯಾಗಿ ಗೊತ್ತೇ ಇಲ್ಲ. ನಾವು ಟ್ವಿಟರ್ ಬಿಟ್ಟು, ಮುಖತಃ ಇದುವರೆಗೆ ಮಾತುಕತೆ ನಡೆಸಿಲ್ಲ. ಜನ ಹೇಗೆ ಟ್ವಿಟರ್ ಸಂಭಾಷಣೆ ನೋಡಿ ನಮ್ಮ ನಡುವೆ ಸಂಬಂಧ ಕಲ್ಪಿಸುತ್ತಾರೋ.. ನೋಡಿಯೇ ನನಗೆ ನಗು ಬಂತು’ ಎಂದು ಹಾರ್ದಿಕ್ ಹೇಳಿಕೊಂಡಿದ್ದಾರೆ.

 
ಇದನ್ನೂ ಓದಿ.. 6 ವರ್ಷದ ಬಾಲಕಿ ಸಚಿನ್ ತೆಂಡುಲ್ಕರ್ ಗೆ ಬರೆದ ಪತ್ರ ಈಗ ವೈರಲ್
 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

6 ವರ್ಷದ ಬಾಲಕಿ ಸಚಿನ್ ತೆಂಡುಲ್ಕರ್ ಗೆ ಬರೆದ ಪತ್ರ ಈಗ ವೈರಲ್