Publish Date: Thu, 07 Sep 2017 (08:29 IST)
Updated Date: Thu, 07 Sep 2017 (08:31 IST)
ಮುಂಬೈ: ಇತ್ತೀಚೆಗಷ್ಟೇ ಟೀಂ ಇಂಡಿಯಾ ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ಮತ್ತು ಪರಿಣಿತಿ ಚೋಪ್ರಾ ನಡುವಿನ ಟ್ವಿಟರ್ ಸಂಭಾಷಣೆ ಟ್ವಿಟರ್ ನಲ್ಲಿ ಭಾರೀ ಗುಲ್ಲೆಬ್ಬಿಸಿತ್ತು.
ಇವರಿಬ್ಬರ ನಡುವೆ ಲವ್ ಶುರುವಾಗಿದೆ ಎಂದು ಇವರ ಟ್ವಿಟರ್ ಸಂಭಾಷಣೆ ನೋಡಿ ಎಲ್ಲರೂ ಅಂದುಕೊಂಡಿದ್ದರು. ಕೊನೆಗೆ ಪರಿಣಿತಿ ಹಾಗೇನೂ ಇಲ್ಲ, ನಾನು ಹೇಳಿದ್ದು ಫೋನ್ ನನ್ನ ಹೊಸ ಸಂಗಾತಿ ಎಂದು ಸ್ಪಷ್ಟನೆ ಕೊಟ್ಟು ಪ್ರಕರಣಕ್ಕೆ ತೆರೆ ಎಳೆಯುವ ಪ್ರಯತ್ನ ಮಾಡಿದರು.
ಆದರೆ ಟ್ವಿಟರಿಗರು ಸುಮ್ಮನಿರಬೇಕಲ್ಲಾ? ಪಾಂಡ್ಯಗೆ ಬುದ್ಧಿವಾದ ಹೇಳಿದ್ದಾರೆ. ‘ಹುಡುಗ ಹೀರೋಯಿನ್ ಹಿಂದೆ ಬಿದ್ದಿದ್ದಾನೆ. ಸ್ವಲ್ಪ ಕ್ರಿಕೆಟ್ ಕಡೆಗೆ ಗಮನ ಕೊಡೋ..’ ಎಂದು ಟ್ವಿಟರ್ ನಲ್ಲಿ ಪಾಂಡ್ಯಗೆ ಸಲಹೆ ಬಂದಿದೆ.
Krishnaveni
Publish Date: Thu, 07 Sep 2017 (08:29 IST)
Updated Date: Thu, 07 Sep 2017 (08:31 IST)