ಮುಂಬೈ: ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಡ್ರೈವಿಂಗ್ ಸ್ಕೂಲ್ ಒಂದನ್ನು ಉದ್ಘಾಟಿಸಿದ್ದು ಇದೀಗ ಟ್ವಿಟರ್ ನಲ್ಲಿ ಭಾರೀ ಟೀಕೆಗೊಳಗಾಗಿದೆ.
ಅಷ್ಟಕ್ಕೂ ಸಲ್ಲು ಮಿಯಾ ಡ್ರೈವಿಂಗ್ ಶಾಲೆ ಉದ್ಘಾಟಿಸಿದರೆ ಈ ಪಾಟಿ ವ್ಯಂಗ್ಯ ಯಾಕೋ ಎಂದು ನೀವು ಪ್ರಶ್ನಿಸಬಹುದು. ಇದಕ್ಕೆ ಕಾರಣ ಸಲ್ಮಾನ್ ಮೇಲಿನ ಹಿಟ್ ಆಂಡ್ ರನ್ ಕೇಸ್.
ಹಿಂದೊಮ್ಮೆ ಹಿಟ್ ಆಂಡ್ ರನ್ ಮಾಡಿದ್ದಾರೆ ಎಂದು ಸಲ್ಮಾನ್ ಮೇಲೆ ಆರೋಪವಿತ್ತು. ಈ ಪ್ರಕರಣ ಸಲ್ಲು ಮಿಯಾ ಜೀವನಕ್ಕೇ ಒಂದು ಕಪ್ಪು ಚುಕ್ಕೆಯಾಗಿತ್ತು. ಇದೀಗ ಇಂತಹ ಎಡವಟ್ಟು ಮಾಡಿದ ಸಲ್ಲು ಕೈಯಿಂದ ವಾಹನ ಚಲಾಯಿಸುವುದು ಹೇಗೆಂದು ತರಬೇತಿ ನೀಡುವ ಸಂಸ್ಥೆಯೊಂದು ಉದ್ಘಾಟನೆಯಾಗಿದ್ದು ನೋಡಿ, ಭೂತದ ಬಾಯಲ್ಲಿ ಭಗವದ್ಗೀತೆ ಬಂದಂತೆ ಎಂದು ಟ್ವಿಟರಿಗರು ಕಾಲೆಳೆಯುತ್ತಿದ್ದಾರೆ.