Publish Date: Thu, 08 Jul 2021 (11:11 IST)
Updated Date: Thu, 08 Jul 2021 (11:12 IST)
ಮುಂಬೈ: ಟೀಂ ಇಂಡಿಯಾ ಮಾಜಿ ನಾಯಕ, ಬಿಸಿಸಿಐ ಹಾಲಿ ಅಧ್ಯಕ್ಷ ಸೌರವ್ ಗಂಗೂಲಿಗೆ ಇಂದು ಜನ್ಮದಿನದ ಸಂಭ್ರಮ. ಅವರ ಜನ್ಮದಿನಕ್ಕೆ ಅವರ ಮಾಜಿ ಸಹ ಕ್ರಿಕೆಟಿಗರು, ಗೆಳೆಯರು ಶುಭ ಹಾರೈಸಿದ್ದಾರೆ.
ಗಂಗೂಲಿಗೆ ಅತ್ಯಂತ ಆಪ್ತರಾಗಿದ್ದವರಲ್ಲಿ ವೀರೇಂದ್ರ ಸೆಹ್ವಾಗ್, ವಿವಿಎಸ್ ಲಕ್ಷ್ಮಣ್, ಹರ್ಭಜನ್ ಸಿಂಗ್, ವಾಸಿಂ ಜಾಫರ್, ವೆಂಕಟೇಶ್ ಪ್ರಸಾದ್ ಸೇರಿದಂತೆ ಕ್ರಿಕೆಟ್ ಲೋಕವೇ ಸಾಮಾಜಿಕ ಜಾಲತಾಣದ ಮೂಲಕ ಗಂಗೂಲಿಗೆ ಶುಭಾಶಯ ಕೋರಿದೆ.
ವಿಶೇಷವೆಂದರೆ ಟೀಂ ಇಂಡಿಯಾ ಕಂಡ ಅತ್ಯಂತ ಯಶಸ್ವೀ ನಾಯಕರಲ್ಲಿ ಧೋನಿ ಮತ್ತು ಗಂಗೂಲಿ ಮುಂಚೂಣಿಯಲ್ಲಿದ್ದಾರೆ. ಧೋನಿ ಜುಲೈ 7 ರಂದು ಬರ್ತ್ ಡೇ ಆಚರಿಸಿಕೊಂಡರೆ ಅದರ ಮರುದಿನವೇ ದಾದ ಬರ್ತ್ ಡೇ ಇರುವುದು ವಿಶೇಷ.