Publish Date: Thu, 08 Jul 2021 (10:15 IST)
Updated Date: Thu, 08 Jul 2021 (10:37 IST)
ರಾಂಚಿ: ನಿನ್ನೆಯಷ್ಟೇ ಹುಟ್ಟುಹಬ್ಬದಾಚರಣೆ ಮಾಡಿಕೊಂಡಿದ್ದ ಟೀಂ ಇಂಡಿಯಾ ಕೂಲ್ ಕ್ಯಾಪ್ಟನ್ ಎಂ.ಎಸ್. ಧೋನಿ ಹೊಸ ಲುಕ್ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಧೋನಿ ಉದ್ದ ಮೀಸೆ ಬಿಟ್ಟುಕೊಂಡು, ದಾಡಿ ಇಟ್ಟುಕೊಂಡು ನಗುತ್ತಾ ತಮಗೆ ಸಿಕ್ಕ ಬರ್ತ್ ಡೇ ಉಡುಗೊರೆಯೊಂದಿಗೆ ಪೋಸ್ ನೀಡಿರುವ ಫೋಟೋ ಈಗ ವೈರಲ್ ಆಗಿದೆ.
ಧೋನಿ ತಮ್ಮ ಕೇಶ ಶೈಲಿಗಳಿಂದಲೇ ಆರಂಭದಿಂದಲೂ ಎಲ್ಲರ ಗಮನ ಸೆಳೆಯುತ್ತಿದ್ದರು. ಅವರ ಕೇಶ ಶೈಲಿಗಳು ಎಷ್ಟೋ ಬಾರಿ ಟ್ರೆಂಡ್ ಆಗಿದ್ದವು. ಇದೀಗ ಹೊಸ ಶೈಲಿಯೊಂದಿಗೆ ಬರ್ತ್ ಡೇ ದಿನ ಕಾಣಿಸಿಕೊಂಡಿದ್ದು, ಅಭಿಮಾನಿಗಳು ಇಷ್ಟಪಟ್ಟಿದ್ದಾರೆ.