Select Your Language

Notifications

webdunia
webdunia
webdunia
webdunia

ವಿರಾಟ್ ಕೊಹ್ಲಿ ಎಂದರೆ ತಲೆನೋವೇ ಎಂದವರು ಯಾರು ಗೊತ್ತೇ?

ವಿರಾಟ್ ಕೊಹ್ಲಿ
ಎಡ್ಜ್ ಬಾಸ್ಟನ್: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಎಂದರೆ ಯಾವುದೇ ನಾಯಕನಿಗೂ ತಲೆನೋವೇ ಹೀಗಂತ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಮುಷ್ತಾಕ್ ಮೊಹಮ್ಮದ್ ಹೇಳಿಕೊಂಡಿದ್ದಾರೆ.

‘ಸುನಿಲ್ ಗವಾಸ್ಕರ್, ಸಚಿನ್ ತೆಂಡುಲ್ಕರ್ ನಿಂದ ಇಂದಿನ ವಿರಾಟ್ ಕೊಹ್ಲಿಯವರೆಗೆ ಭಾರತ ಅತ್ಯುತ್ತಮ ಕ್ರಿಕೆಟಿಗರನ್ನು  ಹೊಂದಿದೆ. ಆದರೆ ಗವಾಸ್ಕರ್, ತೆಂಡುಲ್ಕರ್ ಗೆ ಹೋಲಿಸಿದರೆ ಕೊಹ್ಲಿ ಯಾವುದೇ ಪಾಕ್ ನಾಯಕನಿಗೆ ದೊಡ್ಡ ತಲೆನೋವು ತಂದಿಡಬಲ್ಲರು’ ಎಂದು ಮುಷ್ತಾಕ್ ಅಭಿಪ್ರಾಯಪಟ್ಟಿದ್ದಾರೆ.

‘ಹಾಗಂತ ಸಚಿನ್, ಗವಾಸ್ಕರ್ ಅವರೆಲ್ಲಾ ಕೊಹ್ಲಿಗಿಂತ ಕಡಿಮೆ ಗುಣಮಟ್ಟದ ಆಟಗಾರರು ಅಂತಲ್ಲ. ಕೊಹ್ಲಿ ಮೂರೂ ಮಾದರಿಯ ಕ್ರಿಕೆಟ್ ನಲ್ಲಿ ರನ್ ಗಳಿಸುವುದನ್ನು ನೋಡಿದರೆ ನನಗೆ ಹಾಗನಿಸುತ್ತದೆ. ಪ್ರಸಕ್ತ ನಡೆಯುತ್ತಿರುವ ಇಂಗ್ಲೆಂಡ್ ಟೆಸ್ಟ್ ಸರಣಿಯನ್ನೂ ಕೊಹ್ಲಿ ಗೆಲ್ಲಲಿ ಎಂದೇ ಪ್ರಾರ್ಥಿಸುತ್ತೇನೆ’ ಎಂದು ಮುಷ್ತಾಕ್ ಹೇಳಿಕೊಂಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.             

Share this Story:

Follow Webdunia kannada

ಮುಂದಿನ ಸುದ್ದಿ

ಪತಿ ಶೊಯೇಬ್ ಮಲಿಕ್ ಗಿರುವ ಒಂದೇ ಒಂದು ಒಳ್ಳೆ ಗುಣ ಹೇಳಿ ಎಂದರೆ ಸಾನಿಯಾ ಮಿರ್ಜಾ ಹೇಳಿದ್ದೇನು ಗೊತ್ತಾ?