Publish Date: Fri, 03 Aug 2018 (09:20 IST)
Updated Date: Fri, 03 Aug 2018 (09:21 IST)
ಎಡ್ಜ್ ಬಾಸ್ಟನ್: ಇಂಗ್ಲೆಂಡ್ ವಿರುದ್ಧ ಮೊದಲ ಟೆಸ್ಟ್ ಪಂದ್ಯದ ಎರಡೂ ಇನಿಂಗ್ಸ್ ಗಳಲ್ಲಿ ಅಲೆಸ್ಟರ್ ಕುಕ್ ರನ್ನು ಬಲಿ ಪಡೆದ ರವಿಚಂದ್ರನ್ ಅಶ್ವಿನ್ ದಾಖಲೆಯನ್ನೇನೋ ಮಾಡಿದರು.
ಆದರೆ ರವಿಚಂದ್ರನ್ ಅಶ್ವಿನ್ 9 ನೇ ಬಾರಿಗೆ ಅಲೆಸ್ಟರ್ ಕುಕ್ ವಿಕೆಟ್ ಪಡೆದಿದ್ದಕ್ಕೆ ಸಂಭ್ರಮಿಸುತ್ತಿದ್ದರೆ ಇನ್ನೊಂದೆಡೆ ಒಂದು ಕಾಲದ ಶ್ರೇಷ್ಠ ಕ್ರಿಕೆಟಿಗನಾಗಿ ಮೆರೆದಿದ್ದ ಕುಕ್ ವೃತ್ತಿ ಬದುಕಿನ ಕೊನೆಯ ಕ್ಷಣಗಳನ್ನು ಎಣಿಕೆ ಮಾಡುವಂತಾಗಿದೆ.
ಸಚಿನ್ ತೆಂಡುಲ್ಕರ್ ಅವರ ಕ್ರಿಕೆಟ್ ದಾಖಲೆಗಳಿಗೆ ಆತಂಕ ತಂದಿದ್ದ ಕುಕ್ ಇಂದು ಬ್ಯಾಟಿಂಗ್ ಮಾತ್ರವಲ್ಲ, ಫೀಲ್ಡಿಂಗ್ ನಲ್ಲೂ ಕ್ಯಾಚ್ ಕೈ ಚೆಲ್ಲುವ ಮೂಲಕ ಸಂಪೂರ್ಣ ವಿಫಲರಾದರು. ಸಹಜವಾಗಿಯೇ ಅವರ ನಿವೃತ್ತಿಗೆ ಈ ಪಂದ್ಯದ ಬಳಿಕ ಒತ್ತಾಯ ಹೆಚ್ಚಲಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.