Publish Date: Wed, 24 Mar 2021 (09:47 IST)
Updated Date: Wed, 24 Mar 2021 (09:50 IST)
ಪುಣೆ: ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೊದಲ ಏಕದಿನ ಪಂದ್ಯಕ್ಕೆ ಟೀಂ ಇಂಡಿಯಾ ವಿಕೆಟ್ ಕೀಪರ್ ರಿಷಬ್ ಪಂತ್ ರನ್ನು ಕೈ ಬಿಟ್ಟಿದ್ದಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.
ರಿಷಬ್ ಬದಲು ಕೆಎಲ್ ರಾಹುಲ್ ವಿಕೆಟ್ ಕೀಪರ್ ಆಗಿ ಕರ್ತವ್ಯ ನಿಭಾಯಿಸಿದ್ದರು. ಆದರೆ ರಿಷಬ್ ಟೆಸ್ಟ್, ಟಿ20 ಸರಣಿಯಲ್ಲಿ ಅತ್ಯುತ್ತಮ ಫಾರ್ಮ್ ಪ್ರದರ್ಶಿಸಿದರೂ ಏಕದಿನ ಪಂದ್ಯಕ್ಕೆ ಅವರನ್ನು ಆಯ್ಕೆ ಮಾಡದೇ ಫಾರ್ಮ್ ಕಳೆದುಕೊಂಡಿರುವ ಕೆಎಲ್ ರಾಹುಲ್ ಗೆ ಹೆಚ್ಚುವರಿ ಜವಾಬ್ಧಾರಿ ನೀಡಿರುವುದು ಪಂತ್ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದೆ.
ರಾಹುಲ್ ಗೆ ಅವಕಾಶ ನೀಡಬೇಕಾದರೆ ರಿಷಬ್ ಗೆ ವಿಶ್ರಾಂತಿ ನೀಡುವುದು ಅನಿವಾರ್ಯವಾಗಿತ್ತು. ಆದರೆ ರಿಷಬ್ ಇಲ್ಲದೇ ಪಂದ್ಯ ನೋಡಲೂ ಉತ್ಸಾಹ ಬರುತ್ತಿಲ್ಲ ಎಂದು ಅಭಿಮಾನಿಗಳು ಸಾಮಾಜಿಕ ಜಾಲತಾಣದ ಮೂಲಕ ಪ್ರತಿಕ್ರಿಯಿಸಿದ್ದರು. ಆದರೆ ಅಂತಿಮವಾಗಿ ರಾಹುಲ್ ಹೊಡೆಬಡಿಯ ಆಟವಾಡಿದ್ದು ನೋಡಿ ಟೀಕಾಕಾರರು ಸುಮ್ಮನಾಗಿದ್ದರು.