Publish Date: Wed, 24 Mar 2021 (09:29 IST)
Updated Date: Wed, 24 Mar 2021 (09:31 IST)
ಪುಣೆ: ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೊದಲ ಏಕದಿನ ಪಂದ್ಯದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಪದಾರ್ಪಣೆ ಮಾಡಿದ ಕರ್ನಾಟಕ ಮೂಲದ ವೇಗದ ಬೌಲರ್ ಪ್ರಸಿದ್ಧ ಕೃಷ್ಣ ದಾಖಲೆಯೊಂದನ್ನು ಮಾಡಿದ್ದಾರೆ.
ಮೊದಲ ಓವರ್ ಗಳಲ್ಲಿ ಸಾಕಷ್ಟು ರನ್ ನೀಡಿದರೂ ಹಿಂಜರಿಯದ ಪ್ರಸಿದ್ಧ ಎರಡನೇ ಸ್ಪೆಲ್ ನಲ್ಲಿ ತಂಡಕ್ಕೆ ಬ್ರೇಕ್ ಥ್ರೂ ನೀಡಿದ್ದರು. ಒಟ್ಟು ನಾಲ್ಕು ವಿಕೆಟ್ ಕಬಳಿಸಿದ ಪ್ರಸಿದ್ದ 24 ವರ್ಷಗಳ ಹಳೆಯ ದಾಖಲೆಯೊಂದನ್ನು ಮುರಿದಿದ್ದಾರೆ.
54 ರನ್ ನೀಡಿ 4 ವಿಕೆಟ್ ಕಬಳಿಸಿದ ಪ್ರಸಿದ್ಧ ಕೃಷ್ಣ ಈ ಮೂಲಕ ಚೊಚ್ಚಲ ಪಂದ್ಯದಲ್ಲೇ ವೇಗಿಯೊಬ್ಬರು ಮೂರಕ್ಕಿಂತ ಹೆಚ್ಚು ಕಬಳಿಸಿದ 24 ವರ್ಷಗಳ ಹಳೆಯ ದಾಖಲೆಯನ್ನು ಮುರಿದಿದ್ದಾರೆ. ಇದಕ್ಕೂ ಮೊದಲು ವೆಸ್ಟ್ ಇಂಡೀಸ್ ಪರ ನೊಯೆಲ್ ಡೇವಿಡ್ ಚೊಚ್ಚಲ ಪಂದ್ಯದಲ್ಲಿ 21 ರನ್ ನೀಡಿ 3 ವಿಕೆಟ್ ಕಬಳಿಸಿದ್ದು ದಾಖಲೆಯಾಗಿತ್ತು.