Publish Date: Tue, 23 Mar 2021 (10:11 IST)
Updated Date: Tue, 23 Mar 2021 (10:12 IST)
ಪುಣೆ: ಭಾರತ ಮತ್ತು ಇಂಗ್ಲೆಂಡ್ ನಡುವೆ ಇಂದಿನಿಂದ ಏಕದಿನ ಸರಣಿ ಆರಂಭವಾಗಲಿದ್ದು, ಮೊದಲ ಪಂದ್ಯದಲ್ಲಿ ಭಾರತದ ಆಡುವ ಬಳಗದ ಬಗ್ಗೆ ತೀವ್ರ ಕುತೂಹಲ ಮೂಡಿದೆ.
ಮೂಲಗಳ ಪ್ರಕಾರ ಇಂದಿನ ಪಂದ್ಯಕ್ಕೆ ಇಬ್ಬರು ಯುವ ಆಟಗಾರಿಗೆ ಚೊಚ್ಚಲ ಪಂದ್ಯವಾಡುವ ಅವಕಾಶ ಸಿಗಲಿದೆ ಎಂಬ ಸುದ್ದಿಯಿದೆ. ಹಾಗಿದ್ದರೆ ಕನ್ನಡಿಗ ವೇಗಿ ಪ್ರಸಿದ್ಧ ಕೃಷ್ಣಗೆ ಅದೃಷ್ಟ ಒಲಿಯುತ್ತಾ ಕಾದುನೋಡಬೇಕಿದೆ.
ಟೀಂ ಇಂಡಿಯಾ ಏಕದಿನ ಸರಣಿಗೆ ಮೂವರು ಹೊಸ ಆಟಗಾರರಿಗೆ ಅವಕಾಶ ನೀಡಲಾಗಿದೆ. ಆ ಪೈಕಿ ಕೃನಾಲ್ ಪಾಂಡ್ಯ ಈಗಾಗಲೇ ಅಂತಾರಾಷ್ಟ್ರೀಯ ಪಂದ್ಯವಾಡಿದ್ದಾರೆ. ಮೊದಲ ಬಾರಿಗೆ ಆಡುವವರೆಂದರೆ ಸೂರ್ಯಕುಮಾರ್ ಯಾದವ್ ಮತ್ತು ಪ್ರಸಿದ್ಧ ಕೃಷ್ಣ. ಇಬ್ಬರು ಹೊಸಬರಿಗೆ ಅವಕಾಶ ನೀಡುವುದಾದರೆ ಈ ಇಬ್ಬರೂ ಇಂದು ರಾಷ್ಟ್ರೀಯ ತಂಡದ ಪರ ಮೊದಲ ಬಾರಿಗೆ ಏಕದಿನ ಪಂದ್ಯವಾಡುವ ಅವಕಾಶ ಪಡೆಯಲಿದ್ದಾರೆ.