Publish Date: Thu, 12 Aug 2021 (10:21 IST)
Updated Date: Thu, 12 Aug 2021 (10:23 IST)
ಲಾರ್ಡ್ಸ್: ಭಾರತ ಮತ್ತು ಇಂಗ್ಲೆಂಡ್ ನಡುವಿನ ಎರಡನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮೇಲೆ ಎಲ್ಲರ ನಿರೀಕ್ಷೆಯಿದೆ.
ಎರಡು ವರ್ಷದಿಂದ ವಿರಾಟ್ ಕೊಹ್ಲಿ ಬ್ಯಾಟ್ ಮೊದಲಿನಂತೆ ಸದ್ದು ಮಾಡುತ್ತಿಲ್ಲ. ಕಳೆದ ಪಂದ್ಯದಲ್ಲಂತೂ ಬಂದ ಬಾಲ್ ಗೇ ಔಟಾಗಿ ಹೋಗಿದ್ದರು. 2019 ರಿಂದ ಕೊಹ್ಲಿ ಒಂದೇ ಒಂದು ಶತಕ ಗಳಿಸಿಲ್ಲ.
ಕೊಹ್ಲಿ ಬ್ಯಾಟಿಂಗ್ ಬಡವಾಗಿರುವುದರಿಂದ ಭಾರತದ ಬ್ಯಾಟಿಂಗ್ ಕೂಡಾ ಬಡವಾಗಿದೆ. ಹೀಗಾಗಿ ಕ್ರಿಕೆಟ್ ಕಾಶಿ ಲಾರ್ಡ್ಸ್ ನಲ್ಲಾದರೂ ಕೊಹ್ಲಿ ಆ ಅಪವಾದ ತೊಡೆದು ಮತ್ತೆ ಫಾರ್ಮ್ ಪ್ರದರ್ಶಿಸಬಹುದು ಎಂಬ ನಿರೀಕ್ಷೆ ಅಭಿಮಾನಿಗಳದ್ದು.