ಲಾರ್ಡ್ಸ್: ಟೀಂ ಇಂಡಿಯಾ ಹೆಡ್ ಕೋಚ್ ರವಿಶಾಸ್ತ್ರಿ ಮತ್ತು ಬಳಗ ಮುಂಬರುವ ಟಿ20 ವಿಶ್ವಕಪ್ ಬಳಿಕ ಟೀಂ ಇಂಡಿಯಾ ಹುದ್ದೆಯಿಂದ ಹೊರಬರಲಿದೆ ಎಂಬ ಸುದ್ದಿಯಿದೆ.
ಅಕ್ಟೋಬರ್ ವೇಳೆಗೆ ರವಿಶಾಸ್ತ್ರಿ ಗುತ್ತಿಗೆ ಅವಧಿ ಮುಗಿಯಲಿದ್ದು, ಇದಾದ ಬಳಿಕ ಅವರು ಮುಂದುವರಿಯುವ ಇಚ್ಛೆ ಹೊಂದಿಲ್ಲ ಎಂಬ ಸುದ್ದಿ ಹರಿದಾಡುತ್ತಿದೆ.
ಈ ಹಿನ್ನಲೆಯಲ್ಲಿ ಲಂಡನ್ ನಲ್ಲಿ ಬೀಡುಬಿಟ್ಟಿರುವ ಬಿಸಿಸಿಐ ಅಧಿಕಾರಿಗಳು ಶಾಸ್ತ್ರಿ ಮತ್ತು ಬಳಗದವರೊಂದಿಗೆ ಲಾರ್ಡ್ಸ್ ನಲ್ಲಿ ನಡೆಯಲಿರುವ ಭಾರತ-ಇಂಗ್ಲೆಂಡ್ ದ್ವಿತೀಯ ಟೆಸ್ಟ್ ಬಳಿಕ ಮಾತುಕತೆ ನಡೆಸಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ದ್ರಾವಿಡ್ ಗೆ ಎನ್ ಸಿಎ ಜವಾಬ್ಧಾರಿಯಿಂದ ಮುಕ್ತಿ ನೀಡುತ್ತಿರುವುದರ ಹಿಂದೆ ಟೀಂ ಇಂಡಿಯಾ ಪಟ್ಟ ಕಟ್ಟುವ ಉದ್ದೇಶ ಅಡಗಿದೆ ಎಂಬ ಸುದ್ದಿಯೂ ಹರಿದಾಡುತ್ತಿದೆ.